ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದರ ಇಂಜಿನ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಕ್ಕಿನ ಮರಿಯೊಂದು ಪವಾಡ ಸದೃಶವಾಗಿ ಪಾರಾಗಿದೆ.
ರೊಸಲಿಂಡ್ ಓ’ಬ್ರಿಯಾನ್ ಎಂಬ ಹೆಸರಿನ ಕಾರಿನ ಮಾಲೀಕರು ತಮ್ಮ ಮನೆಯಿಂದ ತಮ್ಮ ತಾಯಿಯ ಮನೆಗೆ ಹೊರಟಿದ್ದರು. ಬೆಕ್ಕಿನಮರಿ ಮಿಯಾವ್ಗುಟ್ಟುವ ಶಬ್ದ ಕೇಳಿದರೂ ಸಹ ಆಕೆಗೆ ಅದು ಕಾರಿನ ಇಂಜಿನ್ನಲ್ಲಿ ಇರಬಹುದು ಎಂಬ ಅಂದಾಜು ಇರಲಿಲ್ಲ. ಹಿಂದಿನ ರಾತ್ರಿ ಮನೆಯಿಂದ ಆಚೆ ಕಣ್ಣಿಗೆ ಕಂಡಿದ್ದ ಬೆಕ್ಕಿನ ಮರಿ ಎಲ್ಲೋ ಹೊರಟುಹೋಗಿದೆ ಎಂದು ಭಾವಿಸಿದ್ದರು ರೊಸಲಿಂಡ್.
ತಮ್ಮ ತಾಯಿಯ ಮನೆ ತಲುಪಿದ ಮೇಲೂ ಸಹ ಬೆಕ್ಕಿನ ಮರಿಯ ಶಬ್ದ ಕೇಳಿದಾಗ RSPCA ಸಹಾಯವಾಣಿಗೆ ಕರೆ ಮಾಡಿದ್ದಾರೆ ರೊಸಲಿಂಡಾ. ಕೊನೆಗೂ ಭಾರೀ ಸಾಹಸ ಮಾಡಿ ಏಳು ವಾರಗಳ ಗಂಡು ಮರಿಯನ್ನು ರಕ್ಷಿಸಲಾಗಿದೆ. ಈಗ ಈ ಬೆಕ್ಕಿನ ಮರಿಯನ್ನು ಸಾಕಿಕೊಳ್ಳಲು ರೊಸಲಿಂಡಾ ನಿರ್ಧರಿಸಿದ್ದಾರೆ.