
ಇದೇ ರೀತಿ ಪಶ್ಚಿಮ ಆಫ್ರಿಕಾದ ನೈಗೇರಿಯಾದ ಹಳ್ಳಿಯೊಂದರಲ್ಲಿ ಶ್ವಾನವೊಂದು ಬೆಕ್ಕಿನ ಮರಿಗೆ ಹಾಲುಣಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
32 ಸೆಕೆಂಡ್ಗಳ ವಿಡಿಯೋದಲ್ಲಿ ನೈಗೇರಿಯಾದ ಹಳ್ಳಿಯ ಬಹುತೇಕ ಜನರು ನಾಯಿ ಹಾಗೂ ಬೆಕ್ಕಿನ ಸುತ್ತ ನಿಂತಿದ್ದಾರೆ. ಇದರಲ್ಲಿ ಹಲವರು ಈ ಅಪರೂಪದ ದೃಶ್ಯವನ್ನ ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ಶ್ವಾನ – ಮಾರ್ಜಾಲದ ಪ್ರೀತಿಗೆ ತಲೆಬಾಗಿದ್ದಾರೆ.