ಜಾಗತಿಕ ತಾಪಮಾನದಿಂದ ಹಿಮಬಂಡೆಗಳು ಕರಗುತ್ತಿದ್ದು, ಇದಕ್ಕೆ ಪೆಂಗ್ವಿನ್ ಗಳ ಮಲವೂ ಕಾರಣ ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ.
ಧ್ರುವಪ್ರದೇಶವಾದ ಅಂಟಾರ್ಕಟಿಕ್ ಸುತ್ತಮುತ್ತಲೂ ಕಿಂಗ್ ಪೆಂಗ್ವಿನ್ ಹೆಚ್ಚಾಗಿದ್ದು, ಎಲ್ಲೆಲ್ಲೂ ಇವುಗಳ ಮಲ ಬಿದ್ದಿದೆ.
ಹಲವು ಪ್ರಾಣಿಗಳ ಮಲ, ಮೂತ್ರವು ಭೂಮಿಯ ಫಲವತ್ತತೆ ಹೆಚ್ಚಿಸಬಲ್ಲ ಹಾಗೂ ಸಸ್ಯಗಳಿಗೆ ಉತ್ತಮ ಸತ್ತ್ವ ನೀಡುವ ಗೊಬ್ಬರಗಳಾಗಬಲ್ಲವು. ಆದರೆ, ಕಿಂಗ್ ಪೆಂಗ್ವಿನ್ ಮಲವು ಪರಿಸರಕ್ಕೆ ಮಾರಕವಾಗಿದೆ. ಈ ಬಗ್ಗೆ ಡೆನ್ಮಾರ್ಕ್ ವಿವಿ ಅಧ್ಯಯನ ನಡೆಸಿದೆ.
ನೈಟ್ರೋಜನ್ ಅಂಶ ಹೆಚ್ಚಿರುವ ಕ್ರಿಲ್, ಸ್ಕ್ವಿಡ್ ಇತ್ಯಾದಿ ಮೀನು ಹಾಗೂ ಜಲಚರಗಳನ್ನು ತಿನ್ನುವ ಪೆಂಗ್ವಿನ್ ಗಳು, ಮಲದ ಮೂಲಕ ನೈಟ್ರಸ್ ಆಕ್ಸೈಡ್ ನ್ನು ಹೊರಸೂಸುತ್ತವೆ. ನಗೆ ಆಮ್ಲದಂತೆ ಕೆಲಸ ಮಾಡುವ ಈ ನೈಟ್ರಸ್ ಆಕ್ಸೈಡ್, ಇಂಗಾಲದ ಡೈ ಆಕ್ಸೈಡ್ ಗಿಂತ 300 ಪಟ್ಟು ಹೆಚ್ಚು ಮಾಲಿನ್ಯಕಾರಿ. ಇದು ಜಾಗತಿಕ ತಾಪಮಾನ ಹೆಚ್ಚಿಸುತ್ತದೆಯಲ್ಲದೆ, ಹಿಮಬಂಡೆಗಳನ್ನು ಕರಗಿಸುತ್ತಿವೆ. ಇನ್ನಷ್ಟು ಸಂಶೋಧನೆಗಳು ಮುಂದುವರಿದಿದೆ.