ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ, ಕ್ವೀನ್ಸ್ ಲ್ಯಾಂಡ್ನ ಜನ ಈಗಲೂ ಮಾನವೀಯತೆ ಜೀವಂತವಾಗಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ.
10 ವರ್ಷದ ಬಾಲಕ ತಾಯಿ ಕೊಡಿಸಿದ್ದ ಸೈಕಲ್ನ್ನು ಕಳೆದುಕೊಂಡಿದ್ದ. ಬಳಿಕ ತಾನು ಸೈಕಲ್ ಕಳೆದುಕೊಂಡಿರುವುದಾಗಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾನೆ. ಆದರೆ ಆರಂಭದಲ್ಲಿ ಇದನ್ನು ಆಕೆ ನಂಬಲಿಲ್ಲ. ಆದರೆ ಮಗ ಹೇಳುತ್ತಿರುವುದು ನಿಜವೆಂದು ತಿಳಿದ ಬಳಿಕ ಆಕೆಯೂ ಗಾಬರಿ ಬಿದ್ದಿದ್ದಾಳೆ.
ಬಳಿಕ ಈ ವಿಷಯ ತಿಳಿದ ಬಾಲಕನ ಊರಿನವರು ಆತನ ಹುಟ್ಟುಹಬ್ಬಕ್ಕೆ ಕೆಲವೇ ದಿನದ ಮೊದಲು ಫಂಡ್ ರೈಸ್ ಮಾಡಿ ಸೈಕಲ್ ಕೊಡಿಸಿದ್ದಾರೆ. ಜನರ ಕೆಲಸ ಬಾಲಕ ಮತ್ತಾತನ ತಾಯಿಗೆ ಅಚ್ಚರಿ ಮೂಡಿಸಿದೆ. ಜನರಲ್ಲಿ ಈಗಲೂ ಮಾನವೀಯತೆ ಇದೆ ಎನ್ನುವುದು ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ.