ಗರ್ಭಿಣಿ ವೇಟ್ರೆಸ್ ಒಬ್ಬರ ಕಥೆಯನ್ನು ಕೇಳಿದ ಪಾಸ್ಟರ್ ಒಬ್ಬರು ಆಕೆಗೆ ಭಾರೀ ಟಿಪ್ ಒಂದನ್ನು ಕೊಟ್ಟ ಘಟನೆ ಜಾರ್ಜಿಯಾದಲ್ಲಿ ಘಟಿಸಿದೆ.
ಇಲ್ಲಿನ ವಾಫಲ್ ಹೌಸ್ನಲ್ಲಿ ವಿಐಪಿಗಳಿಗೆ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದ ಬಿಷಪ್ ಯುಸೆಬೋ ಫೇಲ್ಸಪ್, ವೇಟ್ರೆಸ್ ಹನ್ನಾ ಹಿಲ್ರ ಆತಿಥ್ಯ ಮೆಚ್ಚಿಕೊಂಡು ಆಕೆಗೆ $12,000ಗಳನ್ನು ಟಿಪ್ ಕೊಟ್ಟಿದ್ದಾರೆ.
ಏಳು ವರ್ಷಗಳ ಹಿಂದೆ ಮೃತಪಟ್ಟ ತನ್ನ ಮಗ ಸ್ಯಾಮುಯೆಲ್ ಹೆಸರನ್ನು, ಹನ್ನಾ ತನ್ನ ಪುತ್ರನಿಗೆ ಇಡುವುದಾಗಿ ಕೇಳಿಸಿಕೊಂಡ ಬಿಷಪ್ ಎಸುಬಿಯೋ, ಭಾವುಕರಾಗಿ ಈ ಕೊಡುಗೆ ನೀಡಿದ್ದಾರೆ. ತನ್ನ ವ್ಯಾಲೆಟ್ನಲ್ಲಿ ಆಗ ಇದ್ದ ದುಡ್ಡನ್ನೆಲ್ಲಾ ಹನ್ನಾಗೆ ಕೊಟ್ಟ ಬಳಿಕ ತನ್ನ ಈ ಕಥೆಯನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡ ಬಿಷಪ್, ಆಕೆಗೆ ಕ್ರೌಡ್ ಫಂಡಿಂಗ್ ಮೂಲಕ ಇನ್ನಷ್ಟು ದೇಣಿಗೆ ಸಂಗ್ರಹಿಸಿಕೊಡಲು ನಿರ್ಧರಿಸಿದ್ದಾರೆ.