
ಹಲವು ವಿಚಿತ್ರ, ವಿಲಕ್ಷಣ ಆದೇಶಗಳ ಮೂಲಕ ಹೆಸರಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಹೊಸ ಆದೇಶ ಹೊರಡಿಸಿದ್ದು, ಅಲ್ಲಿಯ ಕೆಲ ಶ್ವಾನ ಪ್ರಿಯ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಕೊರೊನಾ ವೈರಸ್ ಕಾರಣಕ್ಕೆ ರೆಸ್ಟೋರೆಂಟ್ ಗಳಲ್ಲಿ ಮಾಂಸದ ಪೂರೈಕೆ ಕಡಿಮೆಯಾಗಿದ್ದು, ನೀವು ಸಾಕಿದ ನಾಯಿಗಳನ್ನು ಬಿಟ್ಟುಕೊಡಿ ಎಂದು ಕಿಮ್ ಮತ್ತೆ ಮತ್ತೆ ಹೇಳುತ್ತಿದ್ದಾರೆ.
“ಬಡವರು ಜಾನುವಾರುಗಳನ್ನು ಸಾಕುತ್ತಾರೆ. ಶ್ರೀಮಂತರು ಹಾಗೂ ಮಧ್ಯಮ ವರ್ಗದವರು ಮಾತ್ರ ನಾಯಿಗಳನ್ನು ಸಾಕುತ್ತಾರೆ. ನಾಯಿ ಸಾಕುವುದು ಬಂಡವಾಳಶಾಹಿ ಲಕ್ಷಣ. ದೇಶದಲ್ಲಿ ಆಹಾರದ ತೀವ್ರ ಕೊರತೆ ಉಂಟಾಗುತ್ತಿದೆ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ನಾಯಿಗಳನ್ನು ಬಿರ್ಯಾನಿ ಮಾಡಲು ಬಿಟ್ಟುಕೊಡಿʼʼ ಎಂಬುದು ಕಿಮ್ ಮೌಖಿಕ ಆದೇಶ.