ನೋವೆಲ್ ಕೊರೊನಾ ವೈರಸ್ ಹರಡುವಿಕೆಯಲ್ಲಿ ಮಕ್ಕಳು ವಿಶೇಷವಾಗಿ 10 ವರ್ಷದ ಒಳಗಿನವರು ಮುಖ್ಯ ಪಾತ್ರ ವಹಿಸುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ.
ಕೆನಡಾದ ಮೆಕ್ ಮಾಸ್ಟರ್ ವಿಶ್ವ ವಿದ್ಯಾಲಯದ ಸಂಶೋಧಕರ ತಂಡ ಸಾರ್ವಜನಿಕ ಆರೋಗ್ಯ ವೃತ್ತಿಪರರಿಗೆ ಹಾಗೂ ಆಡಳಿತ ವರ್ಗಕ್ಕೆ ಉನ್ನತ ದರ್ಜೆ ಸಂಶೋಧನೆಯ ಸಾರಾಂಶಗಳನ್ನು, ದಾಖಲೆಗಳನ್ನು ಒದಗಿಸಿದೆ. ಸೋಂಕಿಗೆ ತುತ್ತಾದ ಮಕ್ಕಳ ಮನೆ ಹಾಗೂ ಸಮುದಾಯವನ್ನು ಅನುಸರಿಸಿ ಡೇಟಾ ಸಂಗ್ರಹಿಸಲಾಗಿದೆ.
“ಮಕ್ಕಳಿಗಿಂತ ಹಿರಿಯರು ಕೊರೊನಾ ವೈರಸ್ ಹರಡಲು ಕಾರಣೀಕರ್ತರಾಗಿದ್ದಾರೆ. ಮನೆಯ ವಾತಾವರಣದಲ್ಲಿ ಹಿರಿಯರು ಮಕ್ಕಳಿಗಿಂತ ಹೆಚ್ಚು ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತಾರೆ” ಎಂದು ಮೆಕ್ ಮಾಸ್ಟರ್ ಯುನಿವರ್ಸಿಟಿಯ ನೀಲ್ ಸಜಟ್ರಾಮೋಕ್ ಹೇಳಿದ್ದಾರೆ. ವಿಶ್ಲೇಷಣೆ 33 ಪ್ರಕಟಣೆಗಳನ್ನು ಪರಿಗಣಿಸಿದೆ. ಕುಟುಂಬಗಳು ಕೊರೊನಾ ವೈರಸ್ ಕಾಲದಲ್ಲಿ ಗಮನಾರ್ಹ ಒತ್ತಡ ಎದುರಿಸುತ್ತಿವೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.