ಬೋಸ್ಟನ್: ಮನೆಗೆ ಬೇಕಾದ ಸಾಮಗ್ರಿಗಳನ್ನು ಪ್ರತಿನಿತ್ಯ ತಂದುಕೊಡುತ್ತಿದ್ದ ಡೆಲಿವರಿ ಮ್ಯಾನ್ ಬಗ್ಗೆ ಪ್ರೀತಿ ಹೊಂದಿದ್ದ ಇಂಗ್ಲೆಂಡ್ ನ ದಕ್ಷಿಣ ಬೋಸ್ಟನ್ ನ ಮಕ್ಕಳ ಗುಂಪೊಂದು ಆತನ ಸಮವಸ್ತ್ರದ ರೀತಿಯ ಬಟ್ಟೆ ತೊಟ್ಟು ಅಚ್ಚರಿ ಮೂಡಿಸಿದೆ.
ಆ ಪ್ರದೇಶದ ನಿವಾಸಿ ಲೀಸಾ ಕೆನಡಿ ಎಂಬುವವರು ಡೆಲಿವರಿಯಾತನೊಟ್ಟಿಗೆ ಮಕ್ಕಳು ಕಳೆದ ಅಪರೂಪದ ಕ್ಷಣಗಳ ವಿಡಿಯೋ ಹಾಗೂ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಡೆಲಿವರಿ ಮ್ಯಾನ್ ರೀತಿಯ ಕಂದು ಬಣ್ಣದ ಬಟ್ಟೆಗಳನ್ನು ಪುಟ್ಟ ಪುಟ್ಟ ಮುದ್ದು ಮಕ್ಕಳು ಹಾಕಿ ಕುಳಿತಿದ್ದಲ್ಲದೆ, ಒಂದು ನಾಯಿಗೂ ಅದೇ ಬಣ್ಣದ ಬಟ್ಟೆ ತೊಡಿಸಿದ ಫೋಟೋ ತುಂಬಾ ಮೆಚ್ಚುಗೆ ಪಡೆದಿದೆ. ನೆಟ್ಟಿಗರು ಈ ಫೋಟೋ ವಿಡಿಯೋ ನೋಡಿ ಸಖತ್ ಎಮೋಷನಲ್ ಆಗಿದ್ದಾರೆ.
ಬೋಸ್ಟನ್ ನ ಯುನೈಟೆಡ್ ಪಾರ್ಸಲ್ ಸರ್ವೀಸ್ (ಯುಪಿಎಸ್) ನ ವಿತರಣಾ ವಾಹನ ಚಾಲಕ ಕೆವಿನ್ ಲೋನ್ಸ್ ಬರಿ ಅವರಿಗೆ ಈ ಅಪರೂಪದ ಪ್ರೀತಿ ಸಿಕ್ಕಿದೆ. ಅವರು ಮನೆಗೆ ಬೇಕಾದ ಸಾಮಗ್ರಿಗಳನ್ನು ಪ್ರತಿ ದಿನ ಪೂರೈಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಹಾಸ್ಯದ ಮಾತುಗಳ ಮೂಲಕ ಮಕ್ಕಳ ಮೊಗದಲ್ಲಿ ನಗು ತರಿಸುತ್ತಾರೆ. ಇದರಿಂದ ಮಕ್ಕಳಿಗೆ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.
https://www.facebook.com/lisa.bourgeault.3/posts/10224374087206284