
ಪಟಾಕಿಗಳನ್ನು ಹಚ್ಚುವಾಗ ಮಕ್ಕಳು ಮಾಡುವ ತುಂಟತನದಿಂದ ಅವಾಂತರವಾದ ಸಾಕಷ್ಟು ನಿದರ್ಶನಗಳ ಬಗ್ಗೆ ವರದಿಗಳನ್ನು ನೋಡುತ್ತಲೇ ಬಂದಿದ್ದೇವೆ.
ಕೊಳಚೆ ಗುಂಡಿಯಲ್ಲಿ ಪಟಾಕಿ ಸಿಡಿಸಿದ ಕಾರಣ ಗುಂಡಿಯ ಬಾಯಿ ತೆರೆದುಕೊಂಡು, ಅದರೊಳಗೆ ಮೂವರು ಮಕ್ಕಳು ಬೀಳುತ್ತಿರುವ ವಿಡಿಯೋವೊಂದನ್ನು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಶೇರ್ ಮಾಡಿದೆ. ಈ ಘಟನೆ ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ ಜರುಗಿದೆ.
CC ಟಿವಿಯಲ್ಲಿ ಸೆರೆಯಾಯ್ತು ಗ್ಯಾಂಗ್ ವಾರ್ ದೃಶ್ಯಾವಳಿ
ಪಟಾಕಿ ಸ್ಫೋಟದ ತೀವ್ರತೆಗೆ ಮ್ಯಾನ್‌ಹೋಲ್ ತೆರೆದುಕೊಂಡು ಮಕ್ಕಳು ಗಾಳಿಯಲ್ಲಿ ತೇಲುತ್ತಿರುವ ಘಳಿಗೆಯನ್ನು ಈ ವಿಡಿಯೋ ತುಣುಕಿನಲ್ಲಿ ನೋಡಬಹುದಾಗಿದೆ. 59 ಸೆಕೆಂಡ್ ಗಳ ಈ ವಿಡಿಯೋವನ್ನು ಫೆಬ್ರವರಿ 9ರಂದು ಶೇರ್ ಮಾಡಿಕೊಳ್ಳಲಾಗಿದೆ.
https://twitter.com/yong30587269/status/1359297983330721796?ref_src=twsrc%5Etfw%7Ctwcamp%5Etweetembed%7Ctwterm%5E1359297983330721796%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-kid-went-flying-after-dropping-lit-firecrackers-in-a-manhole-in-china-3415106.html