
ಚೀನಾದ ಜಿಯಾಂಗ್ಸುನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಎರಡು ವರ್ಷದ ಮಗು ಐದನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಆತನನ್ನು ಪಕ್ಕದ ಮನೆಯವನು ಕ್ಯಾಚ್ ಹಿಡಿದು ರಕ್ಷಿಸಿದ್ದಾನೆ. ಘಟನೆ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಜುಲೈ 9ರಂದು ನಡೆದಿದೆ. ಎರಡು ವರ್ಷದ ಬಾಲಕ ರೂಮ್ ಲಾಕ್ ಮಾಡಿದ್ದಾನೆ. ನಂತ್ರ ಸ್ಟೂಲ್ ಸಹಾಯದಿಂದ ಕಿಟಕಿವರೆಗೆ ಬಂದು ಏರ್ ಕಂಡೀಶನರ್ ಸಹಾಯದಿಂದ ಕೆಳಗೆ ನೆಗೆದಿದ್ದಾನೆ. ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕನನ್ನು ಪಕ್ಕದ ಮನೆ ಲಿ ದೇಹೈ ನೋಡಿದ್ದಾನೆ.
ತಕ್ಷಣ ಅಲರ್ಟ್ ಆದ ಲಿ, ಐದು ಜನರೊಂದಿಗೆ ಬಾಲಕನನ್ನು ಹಿಡಿಯಲು ಸಜ್ಜಾಗಿದ್ದಾನೆ. ಬಾಲಕ ಕೆಳಗೆ ಬೀಳ್ತಿದ್ದಂತೆ ಅವನನ್ನು ಕ್ಯಾಚ್ ಹಿಡಿದು ಪ್ರಾಣ ಉಳಿಸಿದ್ದಾನೆ.
https://youtu.be/f1nlDpLVGHw