ಬ್ರಿಟಸ್ನ ಡ್ಯೂಕ್ ವಿಲಿಯಂ ತಮ್ಮ ಅಧಿಕೃತ ಪ್ರವಾಸದ ವೇಳೆ ರೆಸ್ಟೋರೆಂಟ್ ಒಂದನ್ನು ಇಣುಕಿ ನೋಡುತ್ತಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೀಗ ಕೆಎಫ್ಸಿ ಇದೇ ಚಿತ್ರಕ್ಕೆ ವಿನೋದಮಯ ಚಟಾಕಿಯೊಂದನ್ನು ಸೇರಿಸಿ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದೆ. ”ನಾನೂ ವಿಂಗ್ ಆಗಲು ಕಾಯಲಾರೆ” ಎಂದು ವಿಲಿಯಂ ಅಂದುಕೊಳ್ಳುತ್ತಿರಬಹುದು ಎಂದು ಕೆಎಫ್ಸಿ ಚಟಾಕಿ ಹಾರಿಸಿದೆ.
ಲಂಡನ್ನ ವಾಟರ್ಲೂ ಪ್ರದೇಶದಲ್ಲಿ ಛಾಯಾಚಿತ್ರಗಳ ಪ್ರದರ್ಶನವೊಂದನ್ನು ನೋಡಲು ಮಡದಿಯೊಂದಿಗೆ ಬಂದಿದ್ದ ವೇಳೆ ವಿಲಿಯಂ ಹೀಗೆ ಮಾಡಿದ್ದಾರೆ. ಮೊದಲೇ ವಿಐಪಿ ಆದ ಡ್ಯೂಕ್ ಮೇಲೆ ಪತ್ರಕರ್ತರ ಕಣ್ಣು ಇದ್ದೇ ಇರುತ್ತದೆ. ಇನ್ನು ಕೇಳಬೇಕೇ? ಈ ಕ್ಷಣವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.