ಸಾಗರಖಾದ್ಯ ಪ್ರಿಯರಿಗೆ ತಾಜಾ ಮೀನುಗಳ ಲಭ್ಯತೆ ಬಹಳ ಚಾಲೆಂಜಿಂಗ್ ಆಗಿಯೇ ಇರುತ್ತದೆ. ತಾಪಮಾನ ಹೆಚ್ಚಿರುವ ಕಡೆಗಳಲ್ಲಿ ಮೀನುಗಳನ್ನು ಶೀತಲ ಸಂಗ್ರಹಾಗಾರಗಳಲ್ಲಿ ಇಡುವುದೇ ದೊಡ್ಡ ಸವಾಲು.
ಆದರೆ ಚೀನಾ, ಜಪಾನ್ ಸೇರಿದಂತೆ ಆಗ್ನೇಯ ಏಷ್ಯಾದ ಅನೇಕ ದೇಶಗಳಲ್ಲಿ ಜೀವಂತ ಮೀನುಗಳನ್ನು ಸಾಗರಖಾದ್ಯ ಪ್ರಿಯರಿಗೆ ಒದಗಿಸಲು ಹೊಸ ವ್ಯವಸ್ಥೆಯೊಂದನ್ನು ಮಾಡಿಕೊಳ್ಳಲಾಗಿದೆ. ಜಪಾನ್‌ನ ಟೋಕ್ಯೋದಲ್ಲಿ ಜೀವಂತ ಮೀನಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಮಾರುಕಟ್ಟೆಯಲ್ಲಿ ಭಾರೀ ಬೆಲೆಯಿದೆ.
ಆದರೆ ಮೀನನ್ನು ಜೀವಂತವಾಗಿ ಮನೆಗೆ ಒಯ್ಯಲು ಕಂಟೇನರ್‌ಗಳನ್ನು ತರುವುದು ಗ್ರಾಹಕರಿಗೆ ಅಸಾಧ್ಯವಾದ ಮಾತು. ಕೋವಿಡ್-19 ಕಾಟದ ನಡುವೆ ಮೀನುಗಳ ಸಾಗಾಟ ಭಾರೀ ಸವಾಲಿನ ಕೆಲಸವಾಗಿದೆ.
ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಕೊರೊನಾ ಎರಡನೇ ಅಲೆ
ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಜಪಾನ್‌ನ ಕಂಪನಿಯೊಂದು ಕೊಂಡೊಯ್ಯಬಹುದಾದ ಮೀನಿನ ಟ್ಯಾಂಕ್ ಒಂದನ್ನು ಪರಿಚಯಿಸುತ್ತಿದೆ. ಎಂಎ ಕಾರ್ಪೋರೇಷನ್ ವಿನ್ಯಾಸಗೊಳಿಸಿದ ಈ ಟ್ಯಾಂಕ್ ಇನ್ನೂ ಅಭಿವೃದ್ಧಿಯ ಆರಂಭಿಕ ಹಂತಗಳಲ್ಲೇ ಇದೆ. ಈ ಟ್ಯಾಂಕ್‌ನ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಣೆ ಮಾಡದೇ ಇದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.
ಗಾಜಿನ ಪ್ಯಾನೆಲ್‌ಗಳನ್ನು ಬಳಸಿಕೊಂಡು ತಯಾರಿಸಲಾದ ಈ ’ಕಟ್ಸುಗ್ಯೋ ಬ್ಯಾಗುಗಳು’ ಮುಂಬರುವ ದಿನಗಳಲ್ಲಿ ಸಖತ್ ಟ್ರೆಂಡ್ ಆದರೂ ಅಚ್ಚರಿಯಿಲ್ಲ.