ಈ ಹುಟ್ಟುಹಬ್ಬ ಅನ್ನೋದು ಕೆಲವು ಮಂದಿಗೆ ಪಾರ್ಟಿಯ ಖುಷಿಗೆ ಕಾರಣವಾದರೆ ಇನ್ನೂ ಕೆಲವರಿಗೆ ವಯಸ್ಸಾಗುತ್ತಿರುವ ಸೂಚಕವಾಗಿ ಅಷ್ಟೇನು ಖುಷಿ ಕೊಡುವ ವಿಚಾರವಲ್ಲ.
ಇಲ್ಲೊಬ ತಂದೆ ತನ್ನ 42ನೇ ವರ್ಷದ ಹುಟ್ಟುಹಬ್ಬಕ್ಕೆಂದು 28 ವರ್ಷಗಳ ಹಿಂದೆ ತನ್ನ ಮಗ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ಅನ್ನು ಜತನದಿಂದ ಕಾಪಾಡಿಕೊಂಡಿದ್ದಾರೆ. ಆಗ 14 ವರ್ಷ ವಯಸ್ಸಿನವನಾಗಿದ್ದ ರಾಬ್ ವಿಟ್ಸ್ ತನ್ನ ತಂದೆಯ 42ನೇ ವರ್ಷದ ಹುಟ್ಟುಹಬ್ಬಕ್ಕೆ ಈ ಗ್ರೀಟಿಂಗ್ ಬರೆದು, “Hey EVERYBODY! He’s 42!
Of course, we won’t draw attention to it, will we? Happy 42nd birthday dad, from Robbie,” ಎಂದು ಸಂದೇಶ ಕಳಿಸಿದ್ದ.
ಇದೀಗ ತನ್ನ ಮಗನ 42ನೇ ವರ್ಷದ ಹುಟ್ಟುಹಬ್ಬಕ್ಕೆಂದು ಅದೇ ಗ್ರೀಟಿಂಗ್ ಅನ್ನು ಕಳಿಸಿದ್ದಾರೆ ರಾಬ್‌ನ ತಂದೆ. ತನ್ನ ಮಗನಿಗೆ ಬಲೇ ಮಾರ್ಮಿಕ ಭಾಷೆಯಲ್ಲಿ ಇದೇ ಗ್ರೀಟಿಂಗ್‌ನಲ್ಲಿದ್ದ ಸಂದೇಶಕ್ಕೊಂದು ಟ್ವಿಸ್ಟ್ ಕೊಟ್ಟಿರುವ ರಾಬ್ಬೀ, “I guess if you wait long enough, what goes around comes around!” ಎಂದು ಸಖತ್ ಟಾಂಗ್ ಕೊಟ್ಟಿದ್ದಾರೆ.
https://twitter.com/eastwoodmaniac/status/1304534373744730113?ref_src=twsrc%5Etfw%7Ctwcamp%5Etweetembed%7Ctwterm%5E1304534373744730113%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fkarmic-justice-dad-sends-sarcastic-card-on-sons-42nd-birthday-he-received-28-years-ago%2F651406