ಆಸ್ಟ್ರೇಲಿಯಾದಲ್ಲಿ ಗಣಿಗೆಂದು ಅಗೆದಿರುವ ಗುಂಡಿಯಲ್ಲಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಕಾಂಗರೋವನ್ನು ರಕ್ಷಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದ್ದು ಕಾಂಗರೋ ಒಂದು ಗುಂಡಿಯಲ್ಲಿ ಬಿದ್ದಿದೆ. ಹೊರಬರಲು ಹಾಗೂ ರಕ್ಷಣೆಗೆಂದು ಒದ್ದಾಡುತ್ತಿದ್ದ ಕಾಂಗರೋವನ್ನು ಗಮನಿಸಿದ ಇಬ್ಬರು ಮಕ್ಕಳು ತಮ್ಮ ತಂದೆಗೆ ವಿಷಯ ಮುಟ್ಟಿಸಿದ್ದಾರೆ. ಅವರು ಕೂಡಲೇ ಪ್ರಾಣಿ ದಯಾ ಸಂಘ ಹಾಗೂ ಇನ್ನಿತರೆ ಸರಕಾರಿ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಬಂದ ಸಿಬ್ಬಂದಿಗಳು ಭಾರಿ ಹೋರಾಟದ ಬಳಿಕ ಕಾಂಗರೋವನ್ನು ಬದುಕಿಸಿದ್ದಾರೆ.
ರಕ್ಷಣಾ ತಂಡದಲ್ಲಿ ಕಾರ್ಯನಿರ್ವಹಿಸಿದ ಮ್ಯಾನ್ಫ್ರೆಂಡ್ ಝಬಿನ್ಸ್‌ಕಸ್ ಈ ಬಗ್ಗೆ ಮಾತನಾಡಿದ್ದು, ಸುಮಾರು 90 ನಿಮಿಷದ ರಕ್ಷಣಾ ಕಾರ್ಯಚರಣೆ ಬಳಿಕ ಕೊನೆಗೂ ಕಾಂಗರೋವನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಾಂಗರೋ 35 ಕೆಜಿ ತೂಕ ಇದಿದ್ದರಿಂದ ಕಾರ್ಯಾಚರಣೆ ಸವಾಲಾಗಿತ್ತು. ಆದರೆ ಅನೇಕರು ತಮ್ಮ ಸಹಾಯಕ್ಕೆ ಬಂದಿದ್ದರಿಂದ ಬದುಕಿಸಲು ಸಾಧ್ಯವಾಯಿತು. ಕಾಂಗರೋ ಭಾರಿ ಆಯಾಸಗೊಂಡಿದ್ದರಿಂದ, ಇದೀಗ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದೀಗ ಈ ಮನಕಲಕುವ ದೃಶ್ಯ ಭಾರಿ ವೈರಲ್ ಆಗಿದೆ.
https://www.facebook.com/FiveFreedomsAnimalRescue/videos/641212819809151