ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಶ್ವೇತವರ್ಣೇತರರ ಪೈಕಿಯ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್ ಈಗ ದೊಡ್ಡ ಸೆನ್ಸೇಷನ್ ಆಗಿದ್ದಾರೆ.
ತಮ್ಮ ಪೆನ್ಸಿಲ್ ಚಿತ್ರ ರಚಿಸಿರುವ ಸ್ಯಾನ್ ಫ್ರಾನ್ಸಿಸ್ಕೋದ 14 ವರ್ಷದ ಹುಡುಗ ಟೈಲರ್ ಗಾರ್ಡನ್‌ನನ್ನು ಖುದ್ದು ಕಮಲಾ ಫೋನ್ ಕರೆ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.
ತನ್ನ ಟ್ವಿಟರ್ ಖಾತೆಯಲ್ಲಿ ಕಮಲಾ ಹ್ಯಾರಿಸ್‌ರನ್ನು ಟ್ಯಾಗ್ ಮಾಡಿ, ಅವರ ಚಿತ್ರ ಬರೆಯುತ್ತಿರುವ ತನ್ನ ವಿಡಿಯೋವನ್ನು ಪೋಸ್ಟ್ ಮಾಡಿದ ಗಾರ್ಡನ್, ಆಕೆಗೆ ತಲುಪುವವರೆಗೂ ಈ ವಿಡಿಯೋವನ್ನು ರೀಟ್ವೀಟ್ ಮಾಡಲು ಕೋರಿಕೊಂಡಿದ್ದಾನೆ.
ಕೊನೆಗೂ ಈ ವಿಷಯ ತಿಳಿದ ಕಮಲಾ, ಟೇಲರ್‌ಗೆ ಕರೆ ಮಾಡಿ, ಆತನ ಈ ವಿಶೇಷ ಕಲೆಗೆ ಧನ್ಯವಾದ ತಿಳಿಸಿದ್ದಾರೆ. “ನಿನ್ನ ಅದ್ಭುತ ಕಲೆಯನ್ನು ಕಂಡು ಮಾತುಗಳೇ ಹೊರಡುತ್ತಿಲ್ಲ. ನಿನ್ನಲ್ಲಿ ನಿಜಕ್ಕೂ ಒಂದು ಗಿಫ್ಟ್ ಇದೆ. ಮೈ ಗುಡ್‌ನೆಸ್! ಓಹ್ ಟೈಲರ್, ಎಂಥ ಅದ್ಭುತ ಕೆಲಸ ಮಾಡಿರುವೆ ನೀನು. ಇದು ಬಹಳ ವಿಶೇಷವಾದ ವಿಚಾರ” ಎಂದು ಕಮಲಾ ಈ ಟೀನೇಜರ್ ಜೊತೆಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾರೆ.