ಫಿಟ್ನೆಸ್ ಗೀಳು ಅಂಟಿಸಿಕೊಂಡಂತೆ ಕಾಣುವ ಎರಡು ಆನೆಗಳು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊಲಂಬಸ್ ಮೃಗಾಲಯ ಹಾಗೂ ಮತ್ಸ್ಯಾಗರದಲ್ಲಿ ಈ ಆನೆಗಳನ್ನು ಅವುಗಳ ಮಾವುತರು ಪಳಗಿಸುತ್ತಿರುವುದನ್ನು ಕಾಣಬಹುದಾಗಿದೆ.
“ಈ ಕಾರ್ಯಕ್ರಮಗಳ ಮೂಲಕ ನಮ್ಮಲ್ಲಿರುವ ಪ್ರತಿಯೊಂದು ಪ್ರಾಣಿಯೂ ಆರೋಗ್ಯಕರವಾಗಿರಲಿ ಎಂದು ಖಾತ್ರಿಪಡಿಸಲು ಇಷ್ಟಪಡುತ್ತೇವೆ,” ಎಂದು ಮೃಗಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕೊನ್ನಿ ಹಾಗೂ ಹಾಂಕ್ ಹೆಸರಿನ ಈ ಎರಡು ಸಲಗಗಳಿಗೆ ವಾರಕ್ಕೆ ನಾಲ್ಕು ದಿವಸ ವ್ಯಾಯಾಮ ಮಾಡಿಸಲಾಗುತ್ತಿದೆ. ಕಾಲುಗಳನ್ನು ಬೇಕಾದ ಹಾಗೆ ಮಡಚಿ, ಸುಲಿಯುವ ಈ ಆನೆಗಳು ವ್ಯಾಯಾಮ ಮಾಡುವುದನ್ನು ನೋಡುವುದೇ ಒಂದು ಚಂದ.
https://www.facebook.com/columbuszoo/videos/745154282999339