ನೇರ ಪ್ರಸಾರವೊಂದರ ವರದಿಗಾರಿಕೆ ಮಾಡುತ್ತಿದ್ದ ಪತ್ರಕರ್ತೆಯೊಬ್ಬರ ಹಲ್ಲೊಂದು ಬಿದ್ದಿದ್ದು, ಅದನ್ನು ಆಕೆ ಹಾಗೇ ಕ್ಯಾಚ್ ಮಾಡಿ, ಪ್ರೋಗಾಂ ವೇಳೆ ಬಹಳ ಕಾಮ್ ಆಗಿ ಇದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉಕ್ರೇನಿಯನ್ ಟಿವಿಯಲ್ಲಿ ಕೊರೊನಾ ವೈರಸ್ ಸಾಂಕ್ರಮಿಕದ ವರದಿಗಾರಿಕೆ ಮಾಡುತ್ತಿದ್ದ ಮಾರಿಚಾ ಪಡಾಲ್ಕೋ ಎಂಬಾಕೆಗೆ ಮಾತನಾಡುತ್ತಿದ್ದ ವೇಳೆಯೇ ಹಲ್ಲು ಕಿತ್ತು ಬಂದಿದೆ. ಬಹಳ ವೃತ್ತಿಪರ ವರ್ತನೆ ತೋರಿದ ಈಕೆ, ಹಾಗೇ ಗೊತ್ತಾಗದಂತೆ ತನ್ನ ಕೈಯನ್ನು ಹಲ್ಲಿನ ಮೇಲೆ ಇಟ್ಟು, ಬೀಳಲಿದ್ದ ಹಲ್ಲನ್ನು ಹಿಡಿದುಕೊಂಡಿದ್ದಾರೆ.
ತಮ್ಮ 20 ವರ್ಷಗಳ ವೃತ್ತಿಯಲ್ಲಿ ಅತ್ಯಂತ ಹೆಚ್ಚು ಟ್ರಿಕ್ಕಿ ಸನ್ನಿವೇಶ ಇದಾಗಿತ್ತೆಂದು ಮಾರಿಚಾ ಹೇಳಿಕೊಂಡಿದ್ದಾರೆ. ಸದಾ ಅನಿಶ್ಚಿತವಾಗಿರುವ ನೇರ ಪ್ರಸಾರ ತಮಗೆ ಬಹಳ ಥ್ರಿಲ್ ಕೊಡುವುದಾಗಿಯೂ ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.
https://www.instagram.com/p/CCqr6gsJ-1_/?utm_source=ig_embed