ವಾಷಿಂಗ್ಟನ್ ಅಮೆರಿಕಾ ಸಂಯುಕ್ತ ಸಂಸ್ಥಾನದ 46 ನೇ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆಯಾಗುತ್ತಿದ್ದಂತೆ ಅವರ ನಿವಾಸದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಜೊ ಅವರ ಮೊಮ್ಮಗಳು ನವೊಮಿ ಬಿಡೆನ್ ಟ್ವೀಟರ್ ನಲ್ಲಿ ಈ ಅಪರೂಪದ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ.
“ಅಧ್ಯಕ್ಷೀಯ ಪಟ್ಟ ಘೋಷಣೆಯಾಗುತ್ತಿದ್ದಂತೆ ನಾವೆಲ್ಲರೂ ಜೊ ಬಿಡೆನ್ ಅವರನ್ನು ಅಪ್ಪಿಕೊಂಡು ಹರ್ಷದ ಕಣ್ಣೀರು ಸುರಿಸಿದೆವು. ಇದು ಬಿಡೆನ್ ಕುಟುಂಬಕ್ಕೆ ಮರೆಯಲಾರದ ಮಹತ್ವದ ದಿನ” ಎಂದು ನವೊಮಿ ಬರೆದಿದ್ದಾರೆ.
ನವೊಮಿ ಟ್ವೀಟ್ ಭಾರಿ ವೈರಲ್ ಆಗಿದ್ದು, 3 ಲಕ್ಷ ಜನ ಲೈಕ್ ಮಾಡಿದ್ದಾರೆ. 46 ಸಾವಿರ ಜನ ರಿ ಟ್ವೀಟ್ ಮಾಡಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ವಿಶ್ವಕ್ಕೆ ಇದು ಮಹತ್ವದ ದಿನ. ಅಪರೂಪದ ಫೋಟೋ ಶೇರ್ ಮಾಡಿದ್ದೀರಿ ಮುಂತಾದ ಅಭಿನಂದನಾಪೂರ್ವಕ ಪ್ರತಿಕ್ರಿಯೆಗಳು ಬಂದಿವೆ.