ವಾಷಿಂಗ್ಟನ್: ಇಡೀ ವಿಶ್ವವೇ ಕೋರೋನಾ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಅಮೆಜಾನ್ ಸಿಇಒ ಆಸ್ತಿ ಮೌಲ್ಯ 13 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಅಮೆಜಾನ್ ಒಡೆಯ ಜೆಫ್ ಬೆಜೋಸ್ ಅವರ ಆಸ್ತಿ 13 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗುವ ಮೂಲಕ ವಿಶ್ವ ಇದುವರೆಗೆ ಕಂಡಿರದಂತಹ ಅತಿ ದೊಡ್ಡ ಶ್ರೀಮಂತ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇನ್ನು ಇವರಿಂದ ಕಳೆದ ವರ್ಷವಷ್ಟೇ ಡೈವೋರ್ಸ್ ಪಡೆದುಕೊಂಡಿರುವ ಮೆಕೆಂಜಿ ಬೆಜೊಸ್ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ.
ಮೆಕೆಂಜಿ ಬೆಜೋಸ್ ಡೈವೋರ್ಸ್ ಪಡೆದುಕೊಂಡ ಸಂದರ್ಭದಲ್ಲಿ 2.8 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪಡೆದುಕೊಂಡಿದ್ದರು. ಅಮೆಜಾನ್ ನಲ್ಲಿ ಷೇರು ಹೊಂದಿರುವ ಮೆಕೆಂಜಿ ಸಂಪತ್ತು 4.32 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅವರು ವಿಶ್ವದ ಎರಡನೇ ಶ್ರೀಮಂತ ಮಹಿಳೆ ಮತ್ತು ವಿಶ್ವದ 12ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 13 ಲಕ್ಷ ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಜೆಫ್ ಬೆಜೋಸ್ ವಿಶ್ವ ಇದುವರೆಗೆ ಕಂಡಿರದ ಅತಿದೊಡ್ಡ ಶ್ರೀಮಂತ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.