ಲೇಖಕಿ, ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋಸ್ ಮಾಜಿ ಪತ್ನಿ ಮ್ಯಾಕೆಂಜಿ ಕಳೆದ ನಾಲ್ಕು ತಿಂಗಳಲ್ಲಿ 4.1 ಬಿಲಿಯನ್ ಡಾಲರ್ ಹಣವನ್ನ ನೂರಾರು ಸಂಸ್ಥೆಗಳಿಗೆ ದಾನ ಮಾಡಿದ್ದಾಗಿ ಹೇಳಿದ್ದಾರೆ.
ಸ್ಕಾಟ್ ತಾನು ಮಾಡಿದ ಉಪಕಾರದ ಕಾರ್ಯವನ್ನ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಆದರೆ ಕೋಟ್ಯಾಧಿಪತಿಗಳು ಇನ್ನಷ್ಟು ಹಣವನ್ನ ಸಂಪಾದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ವಿವಿಧ ವಿಶ್ವವಿದ್ಯಾಲಗಳು, ಹಾಗೂ ಸಂಘ ಸಂಸ್ಥೆಗಳಿಗೆ ಸರಿ ಸುಮಾರು 1.68 ಬಿಲಿಯನ್ ಡಾಲರ್ ದಾನ ಮಾಡಿದ ಬಳಿಕ ಜುಲೈ ತಿಂಗಳಲ್ಲಿ ಸ್ಕಾಟ್ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೀವನ ಸುಧಾರಿಸಲು ನಾವು ಹಣವನ್ನ ನೀಡಿದ್ರೆ ಹೇಗೆ ಎಂದು ತಮ್ಮ ಗುಂಪಿನ ಸದಸ್ಯರ ಬಳಿ ಅಭಿಪ್ರಾಯ ಕೇಳಿದ್ದರು. ‘ ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಕಾಟ್ ಗುಂಪಿನ ಸದಸ್ಯರು ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಸಂಘ – ಸಂಸ್ಥೆಗಳನ್ನ ಗುರುತಿಸಿದ್ದರು.
6490 ಸಂಸ್ಥೆಗಳನ್ನ ಗುರುತಿಸಿದ ಸ್ಕಾಟ್ ಹಾಗೂ ಆಕೆಯ ತಂಡ ಅದರಲ್ಲಿ 822 ಸಂಘಗಳ ಮೇಲೆ ಸಂಶೋಧನೆ ನಡೆಸಿ ಅದರಲ್ಲಿ 438 ಸಂಸ್ಥೆಯನ್ನ ಆಯ್ಕೆ ಮಾಡಿತ್ತು. ಇದರಲ್ಲಿ ಕೂಲಂಕುಷವಾಗಿ ತನಿಖೆ ನಡೆಸಿ 50 ರಾಜ್ಯಗಳ 384 ಸಂಘಗಳಿಗೆ ಸ್ಕಾಟ್ ದಾನ ಮಾಡಿದ್ದಾರೆ ಎನ್ನಲಾಗಿದೆ.