ಸೆಕೆಂಡಿಗಿಷ್ಟು ಎಂದು ದುಡಿಮೆ ಮಾಡುವ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಇವರು, ವರ್ಚ್ಯುಯಲ್ ಸಭೆಯಲ್ಲಿ ಏನು ಮಾಡಿದರು ಗೊತ್ತೆ ?
ಯುಎಸ್ ನ್ಯಾಯಾಂಗ ಸದನ ಸಮಿತಿ ಸಭೆಗೂ ಮುನ್ನ ಪೂರ್ವಭಾವಿಯಾಗಿ ಸಮಾಲೋಚನೆ ನಡೆಸಲು ಆನ್ ಲೈನ್ ನಲ್ಲಿ ಹಲವರನ್ನು ಆಹ್ವಾನಿಸಲಾಗಿತ್ತು.
ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್, ಗೂಗಲ್ ಮತ್ತು ಆಲ್ಫಾಬೆಟ್ ಮುಖ್ಯಸ್ಥ ಸುಂದರ್ ಪಿಚ್ಚೈ, ಆಪಲ್ ಮುಖ್ಯಸ್ಥ ಟಿಮ್ ಕುಕ್ ಹಾಗೂ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜಾಸ್ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಅವರಿಗೆ ಯಾವುದೇ ಪ್ರಶ್ನೆ ಎದುರಾಗದೇ ಇದ್ದುದರಿಂದ ಸುಮ್ಮನೆ ಕೂರುವಂತಾಗಿತ್ತು.
ಸೆಕೆಂಡ್ ಲೆಕ್ಕದಲ್ಲಿ ದುಡಿಯುವ ಈತ ಗಂಟೆಗಟ್ಟಲೆ ಸುಮ್ಮನೆ ಕೂರುವುದೆಂದರೆ ಅದೆಷ್ಟು ನಷ್ಟ ಆಗಬಹುದು ? ಅದೂ ಅಲ್ಲದೆ, ಸಭೆಯ ಮಧ್ಯೆ ಟೈಮ್ ಪಾಸ್ ಆಗದೆ ಬೋರ್ ಆದ ಜೆಫ್ ಬೆಜೋಸ್ ಸ್ನ್ಯಾಕ್ಸ್ ಮೆಲ್ಲುತ್ತಾ ಕುಳಿತಿದ್ದರು. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಚಿತ್ರ-ವಿಚಿತ್ರ ಕಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ಎಂತೆಂಥಾ ಕಮೆಂಟ್ ಬಂದಿದೆ ಎಂದು ನೀವೇ ನೋಡಿ.