ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಇತಿಹಾಸದಲ್ಲೇ ಮೊದಲ ಬಾರಿ 200 (ಶತಕೋಟಿ) ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊರೊನಾದಿಂದಾಗಿ ಇಡೀ ಪ್ರಪಂಚದ ಎಲ್ಲೆಡೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ವ್ಯಾಪಾರ ವಹಿವಾಟುಗಳಲ್ಲಿ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡವರೇ ಹೆಚ್ಚು.
ಆದರೆ, ಆನ್ಲೈನ್ ಶಾಪಿಂಗ್ ಪರಿಣಾಮ ಅಮೆಜಾನ್ ವಹಿವಾಟು ಭರ್ಜರಿಯಾಗಿದ್ದು, ಯುಎಸ್ ತಂತ್ರಜ್ಞಾನಗಳ ರ್ಯಾಲಿ ದೆಸೆಯಿಂದಾಗಿ ಸಾಕಷ್ಟು ಲಾಭವನ್ನೂ ಗಳಿಸಿದೆ. ಒಂದೇ ದಿನದಲ್ಲಿ 5.22 ಶತಕೋಟಿ ಡಾಲರ್ ವಹಿವಾಟು ನಡೆದಿದ್ದು, ಇದರ ಪರಿಣಾಮವಾಗಿ ಎರಡನೇ ಅತಿದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಗಿಂತ 78 ಶತಕೋಟಿ ಡಾಲರ್ ನಷ್ಟು ಜಾಸ್ತಿ ಹೆಚ್ಚು ಆಸ್ತಿಯನ್ನು ಬೆಜೋಸ್ ಹೊಂದಿದ್ದಾರೆ.