ನದಿಯಲ್ಲಿ ಈಜುವಾಗ ಏನಾದರೂ ಸಣ್ಣ ಜೀವಚರ ಎದುರಾದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ಸಮುದ್ರದಲ್ಲಿ ಡೈವಿಂಗ್ ಮಾಡಲು ತೆರಳಿದಾಗಂತೂ ಈ ಭಯ ದುಪ್ಪಟ್ಟಾಗಿರುತ್ತೆ. ಅದೇ ರೀತಿ ಅಮೆರಿಕದ ಫ್ಲೋರಿಡಾದಲ್ಲಿ ಡೈವಿಂಗ್ಗೆ ತೆರಳಿದ್ದ ವ್ಯಕ್ತಿಗೆ ದೈತ್ಯ ಶಾರ್ಕ್ವೊಂದು ಮುಖಾಮುಖಿಯಾಗಿದ್ದು, ಎದೆ ಝಲ್ ಎನ್ನಿಸುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. 55 ವರ್ಷದ ಜಾನ್ ಮೋರೆ ಡೈವಿಂಗ್ ಮಾಡುತ್ತಿದ್ದ ವೇಳೆ ಹೆಣ್ಣು ಶಾರ್ಕ್ಗೆ ಮುಖಾಮುಖಿಯಾಗಿದ್ದಾರೆ.
ಶಾರ್ಕ್ನ ಫೋಟೋವನ್ನ ಅತ್ಯಂತ ಹತ್ತಿರದಿಂದ ಕ್ಲಿಕ್ಕಿಸಿರುವ ಜಾನ್, ಅದರ ಹಲ್ಲಿನ ಫೋಟೋವನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದು ದೈತ್ಯ ಹೆಣ್ಣು ಶಾರ್ಕ್ನ ಅತ್ಯಂತ ಪ್ರಬಲವಾದ ಹಲ್ಲುಗಳು ಎಂದು ಶೀರ್ಷಿಕೆಯಲ್ಲಿ ವಿವರಣೆ ನೀಡಿದ್ದಾರೆ.
ವಿಮಾನ ಪ್ರಯಾಣಿಕನ ಬ್ಯಾಗಲ್ಲಿ ಸಗಣಿ ಕೇಕ್ ಪತ್ತೆ….!
ಇದೊಂದು ಅತ್ಯಂತ ದೈತ್ಯ ಹೆಣ್ಣು ಶಾರ್ಕ್ ಆಗಿದೆ. ಬಹುಶಃ ಈ ಶಾರ್ಕ್ ಗರ್ಭಿಣಿ ಇದ್ದಿರಬಹುದು. ಇದೊಂದು ಪ್ರಬಲ ಶಾರ್ಕ್ ಆಗಿದೆ. ಡೈವಿಂಗ್ ವೇಳೆಯಲ್ಲಿ ಯಾವುದೇ ಭಯವಿಲ್ಲದೇ ಇದು ನನ್ನ ಬಳಿ ಬರುತ್ತಿತ್ತು ಎಂದು ಜಾನ್ ಹೇಳಿದ್ದಾರೆ . ಶಾರ್ಕ್ನ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇಷ್ಟು ಹತ್ತಿರದಿಂದ ಫೋಟೋ ಕ್ಲಿಕ್ಕಿಸಿದ ಮೋರೆಗೆ ಶಹಬ್ಬಾಸ್ ಎಂದಿದ್ದಾರೆ.