ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಜೋ ಬಿಡೆನ್ ಸುದ್ದಿಯೇ ಎಲ್ಲೆಲ್ಲೂ ಎಂಬಂತಾಗಿದೆ. ಇದೇ ವೇಳೆ ಜಪಾನ್‌ನ ಯಮಾಟೋ ನಗರದ ಮೇಯರ್ ಯುಟಾಕಾ ಉಮೇಡಾ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದಾರೆ.
ಉಮೇಡಾ ಹೆಸರನ್ನು ಕಂಜಿ ಅಕ್ಷರಗಳನ್ನು ಬಳಸಿ ಬರೆದಾಗ ಜೋ ಬಿಡೆನ್ ಆಗುವ ಕಾರಣ ಅವರೀಗ ಭಾರೀ ಸುದ್ದಿಯಲ್ಲಿದ್ದಾರೆ. ಚೀನಾ ಮೂಲದ ಕಂಜಿ ಅಕ್ಷರಗಳಿಗೆ ಸಾಕಷ್ಟು ಫೋನೆಟಿಕ್ ಸ್ವರಗಳಿವೆ.
ಮೇಯರ್‌ರ ಮೊದಲ ಹೆಸರನ್ನು ಕಂಜಿಯಲ್ಲಿ ಬರೆದಾಗ 穣, ಆಗಿ ಅದು ಜೋ ಎಂದು ಉಚ್ಛಾರವಾಗುತ್ತದೆ. ಅವರ ಸರ್‌ನೇಮ್ ಅನ್ನು ಬರೆದಾಗ 梅田 ಆಗಿ ಬಿಡೆನ್ ಎಂದು ಉಚ್ಛಾರಗೊಳ್ಳುತ್ತದೆ.
ಈ ಬಗ್ಗೆ ಮಾತನಾಡಿದ ಉಮೇಡಾ, “ಅವರಿಗೆ ಹತ್ತಿರವಾಗಿದ್ದೇನೆ ಎನಿಸುತ್ತಿದೆ. ಖುದ್ದು ನಾನೇ ಚುನಾವಣೆ ಗೆದ್ದಿದ್ದೇನೆ ಅನಿಸುತ್ತಿದೆ. ಅಮೆರಿಕ ಅಧ್ಯಕ್ಷರು ಹಾಗೂ ನನ್ನ ಹುದ್ದೆಗಳ ನಡುವೆ ಭಾರೀ ವ್ಯತ್ಯಾಸವಿದ್ದರೂ ಸಹ ನಮ್ಮಿಬ್ಬರ ಬದ್ಧತೆ ಒಂದೇ ಮಟ್ಟದ್ದಾಗಿದೆ” ಎಂದಿದ್ದಾರೆ.