ಕೋವಿಡ್-19 ಪರಿಹಾರ ಧನವೆಂದು ಮಂಜೂರು ಮಾಡಲಾಗಿದ್ದ ಹಣವನ್ನು ಬೃಹತ್ ಪ್ರತಿಮೆಯೊಂದನ್ನು ನಿರ್ಮಿಸಲು ಬಳಸಿದ ಜಪಾನ್‌ನ ಪಟ್ಟಣ ಪಾಲಿಕೆಯೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ.
ನೋಟೋ ಎಂಬ ಹೆಸರಿನ ಬಂದರು ನಗರದಲ್ಲಿರುವ ಈ ಬೃಹತ್ ಸ್ಕ್ವಿಡ್ ಪ್ರತಿಮೆಯು ನಾಲ್ಕು ಮೀಟರ್ ಎತ್ತರವಿದ್ದು, ಒಂಬತ್ತು ಮೀಟರ್ ಉದ್ದವಿದೆ. ಇದಕ್ಕಾಗಿ ಪಟ್ಟಣದ ಪೌರಾಡಳಿತ ಸಂಸ್ಥೆಯು 25 ಮಿಲಿಯನ್ ಯೆನ್ (1.68 ಕೋಟಿ ರೂ.ಗಳು) ವೆಚ್ಚ ಮಾಡಿದೆ. ಈ ಪಿಂಕ್ ಬಣ್ಣದ ಪ್ರತಿಮೆಗಾಗಿ ತುರ್ತು ಹಣವನ್ನೇ ಬಳಸಿಕೊಂಡಿದೆ ಪಾಲಿಕೆ…!
ಸಾಂಕ್ರಮಿಕದ ಬಳಿಕ ಪ್ರವಾಸಿಗರನ್ನು ಪಟ್ಟಣಕ್ಕೆ ಸೆಳೆಯಲು ಮಾಡಿಕೊಳ್ಳಲಾದ ಪ್ಲಾನ್‌ನ ಭಾಗವಾಗಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ನೋಟೋದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದರೂ ಸಹ ಪ್ರವಾಸಿಗರ ಆಗಮನದಲ್ಲಿ ಭಾರೀ ಇಳಿಕೆಯಾಗಿದೆ.
ಲಸಿಕೆ ವಿತರಣೆ ಬಗ್ಗೆ ಸಚಿವರಿಂದ ಭರ್ಜರಿ ಸಿಹಿ ಸುದ್ದಿ: ಮೇ 10 ರಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್
ಇಶಿಕಾವಾ ಪ್ರಾಂತ್ಯದಲ್ಲಿರುವ ನೋಟೋ ಪಟ್ಟಣಕ್ಕೆಂದು 800 ಮಿಲಿಯನ್ ಯೆನ್ (53.95 ಕೋಟಿ ರೂ.ಗಳು) ಪರಿಹಾರದ ರೂಪದಲ್ಲಿ ಜಪಾನ್‌ನ ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು, ಸಾಂಕ್ರಮಿಕದ ಹಿನ್ನೆಲೆಯಲ್ಲಿ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.
ಅಕ್ಟೋಬರ್ 2020ರಲ್ಲಿ ಪ್ರತಿಮೆ ನಿರ್ಮಾಣ ಕೆಲಸ ಆರಂಭಗೊಂಡಿದ್ದು, ಈ ವರ್ಷದ ಮಾರ್ಚ್‌ನಿಂದ ಸಾರ್ವಜನಿಕರಿಗೆ ತೆರವುಗೊಳಿಸಲಾಗಿದೆ.