alex Certify ಕೊರೊನಾ ಕೊನೆಯಾಗಲೆಂದು ಹಿಮಗಟ್ಟಿದ ನೀರಿಗಿಳಿದು ಪ್ರಾರ್ಥನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕೊನೆಯಾಗಲೆಂದು ಹಿಮಗಟ್ಟಿದ ನೀರಿಗಿಳಿದು ಪ್ರಾರ್ಥನೆ

ಜಪಾನ್​ನ ಸಾಂಪ್ರದಾಯಿಕ ಲುಯಿನ್​ ಬಟ್ಟೆ ಧರಿಸಿದ ಅರೆಬೆತ್ತಲೆ ಪುರುಷರು ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿದ ಮಹಿಳೆಯರು ಮಂಜುಗಡ್ಡೆಯನ್ನ ಇರಿಸಲಾಗಿದ್ದ ನೀರಿನಲ್ಲಿ ಇಳಿದು ಕೊರೊನಾ ವೈರಸ್​ ಕೊನೆಯಾಗಲಿ ಅಂತಾ ಪ್ರಾರ್ಥನೆ ಸಲ್ಲಿಸಿದ್ದಾರೆ.

ಟೋಕಿಯೋದಲ್ಲಿ ನಡೆದ ಶಿಂಟೋ ಸಂಪ್ರದಾಯ ಇದಾಗಿದೆ. ನೀರಿಗೆ ಇಳಿಯುವುದಕ್ಕೂ ಮುನ್ನ ಪುರುಷ ಹಾಗೂ ಮಹಿಳೆಯರ ತಂಡ ಚಪ್ಪಾಳೆ ತಟ್ಟುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.

ಟೆಪ್ಪೋ ಝು ಇನಾರಿ ಶ್ರೈನ್​ನಲ್ಲಿ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಬಾರಿ ಕೇವಲ 1 ಡಜನ್​ ಮಂದಿಯಷ್ಟೇ ಭಾಗಿಯಾಗಿದ್ದರು. ಕಳೆದ ವರ್ಷ ಇದೇ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಆದರೆ ಈ ಬಾರಿ ಕೊರೊನಾ ಆತಂಕ ಹಿನ್ನೆಲೆ ಕಾರ್ಯಕ್ರಮದ ಸಂಘಟಕರು ಜನಸಂದಣಿಗೆ ಅವಕಾಶ ನೀಡಿರಲಿಲ್ಲ.

ಆರಂಭದಲ್ಲಿ ವಾರ್ಮಪ್ ವ್ಯಾಯಾಮಗಳನ್ನ ಮಾಡಿದ ಬಳಿಕ ಶ್ಲೋಕಗಳನ್ನ ಪಠಿಸಿದ ಬಳಿಕ 5.1 ಡಿಗ್ರಿ ಸೆಲ್ಸಿಯಸ್​​ ನೀರಿನಲ್ಲಿ 9 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ನೀರಿನಲ್ಲಿ ಇಳಿದಿದ್ರು. ಈ ಪೂಲ್​ನಲ್ಲಿ ದೊಡ್ಡ ಮಂಜುಗಡ್ಡೆಗಳನ್ನ ಇರಿಸಲಾಗಿತ್ತು,  ನೀರಿನಲ್ಲಿ ಇಳಿದು ಬಳಿಕ ಮಾತನಾಡಿದ 65 ವರ್ಷದ ವೃದ್ಧ, ಕೊರೊನಾ ಆದಷ್ಟು ಬೇಗ ಕೊನೆಯಾಗಲಿ ಎಂದು ಪ್ರಾರ್ಥಿಸಿದೆ ಎಂದು ಹೇಳಿದ್ದಾರೆ.

ಜಪಾನ್​ನಲ್ಲಿ ಈ ಸಂಪ್ರದಾಯ ಪ್ರತಿವರ್ಷವೂ ನಡೆಯುತ್ತೆ. ಆದರೆ ಪ್ರತಿಬಾರಿ ನೀರಿಗೆ ಇಳಿಯುವ ಜನರ ಸಂಖ್ಯೆ ಜಾಸ್ತಿ ಇರ್ತಾ ಇದ್ದಿದ್ದರಿಂದ ಚಳಿಯ ಅನುಭವ ಹೆಚ್ಚಿನ ಸಮಯದವರೆಗೆ ಆಗುತ್ತಿರಲಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...