8 ರಿಂದ 9 ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡೋ ಅನೇಕರು ಲಾಗೌಟ್ ಸಮಯಕ್ಕಿಂತ ಕೆಲ ನಿಮಿಷಗಳ ಮುಂಚೆಯೇ ಆಫೀಸಿನಿಂದ ಹೊರಡೋ ಅಭ್ಯಾಸ ಇಟ್ಕೊಂಡಿರ್ತಾರೆ. ಇದು ಕಂಪನಿ ನಿಯಮಕ್ಕಿಂತ ವಿರುದ್ಧವಾಗಿದ್ದರೂ ಸಹ ಅಂತಹ ದೊಡ್ಡ ಅಪರಾಧ ಕೂಡ ಅಲ್ಲ.
ಆದರೆ ಜಪಾನ್ ಸರ್ಕಾರಿ ಇಲಾಖೆಯಲ್ಲಿ ಈ ರೀತಿ ನಿಗದಿತ ಸಮಯಕ್ಕಿಂತ ಕೆಲವೇ ನಿಮಿಷಗಳ ಮುಂಚೆ ಆಫೀಸಿನಿಂದ ಹೊರ ನಡೆದ ಸಿಬ್ಬಂದಿ ಭಾರೀ ಬೆಲೆ ತೆತ್ತಿದ್ದಾರೆ.
ಚಿಬಾ ಪ್ರಿಫೆಕ್ಚರ್ ಫನಬಾಶಿ ಸಿಟಿ ಬೋರ್ಡ್ ಆಫ್ ಎಜುಕೇಶನ್ ತನ್ನ ಹಲವಾರು ಸಿಬ್ಬಂದಿ ಕೇವಲ 2 ನಿಮಿಷ ಮುಂಚಿತವಾಗಿ ಕಚೇರಿ ತೊರೆದ ಹಿನ್ನೆಲೆ ಅವರ ವೇತನವನ್ನೇ ಕಡಿತಗೊಳಿಸಿದೆ.
ಈ ಬಗ್ಗೆ ಕ್ರಾಸ್ ಚೆಕ್ ಮಾಡಿದ ವೇಳೆ 316 ಬಾರಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಟ ಉದಾಹರಣೆಗಳು ಸಿಕ್ಕಿವೆ. ಅಲ್ಲದೇ ಬಹುತೇಕ ಸಿಬ್ಬಂದಿಯಂತೂ ನಿರ್ಗಮನದ ಸಮಯವನ್ನ ಸುಳ್ಳು ಸುಳ್ಳಾಗಿ ನಮೂದಿಸಿದ್ದಾರೆ.
ಇನ್ನು ಅಸಿಸ್ಟೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 59 ವರ್ಷದ ಸಿಬ್ಬಂದಿ ಉಳಿದ ಸಿಬ್ಬಂದಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಡಲು ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕೆ ಮೂರು ತಿಂಗಳುಗಳ ಕಾಲ ಕಂಪನಿ ಆಕೆಯ ವೇತನದ 10ನೆಯ 1 ಭಾಗವನ್ನ ಕಡಿತ ಮಾಡಿದೆ. ಈಕೆ ಬಸ್ ಮಿಸ್ ಆಗುತ್ತೆ ಎಂಬ ಕಾರಣಕ್ಕೆ ಕಚೇರಿಯಿಂದ ಬೇಗ ನಿರ್ಗಮಿಸಿದ್ದು ಮಾತ್ರವಲ್ಲದೇ ಇತರೆ ಸಿಬ್ಬಂದಿಗೂ ಸಹಾಯ ಮಾಡಿದ್ದಳು ಎನ್ನಲಾಗಿದೆ.