alex Certify ಹೆದರಿಕೆಯಾದರೂ ʼಕೊರೊನಾʼ ಕಾರಣಕ್ಕೆ ಇಲ್ಲಿ ಕಿರುಚುವಂತಿಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆದರಿಕೆಯಾದರೂ ʼಕೊರೊನಾʼ ಕಾರಣಕ್ಕೆ ಇಲ್ಲಿ ಕಿರುಚುವಂತಿಲ್ಲ…!

Japan Theme Park is Open after Lockdown, But With One Condition ...

ಈ ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ ರೋಲರ್ ಕೋಸ್ಟರ್ ಹತ್ತಿ, ಹೆದರಿಕೆಯಾದರೂ ಕಿರುಚಾಡುವಂತಿಲ್ಲ. ಬೊಬ್ಬೆ ಹೊಡೆಯುವಂತಿಲ್ಲ.

ಕಿರುಚಿಕೊಳ್ಳುವುದಿದ್ದರೆ ನಿಮ್ಮ ಮನಸಿನೊಳಗೇ ಇರಬೇಕು‌. ಅರಚಾಟ ಹೊರಗೆ ಕೇಳಿಸುವಂತಿಲ್ಲ.

ಹೌದು, ಲಾಕ್ ಡೌನ್ ಸಡಿಲಗೊಳಿಸಿರುವ ಜಪಾನ್ ನ ಟೋಕಿಯೋದಲ್ಲಿ ಫುಜಿಕ್ಯು ಹೈಲ್ಯಾಂಡ್ ಅಮ್ಯುಸ್ಮೆಂಟ್ ಪಾರ್ಕ್ ಆರಂಭಗೊಂಡಿದೆ.

ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು ಎಂಬಿತ್ಯಾದಿ ಸಾಧಾರಣಗಳ ನಿಯಮಗಳ ಜೊತೆಗೆ ಕಿರುಚಾಡುವಂತಿಲ್ಲ ಎಂಬ ಹೊಸ ನಿಯಮವನ್ನೂ ತನ್ನ ಮಾರ್ಗಸೂಚಿಯಲ್ಲಿ ಸೇರಿಸಿದೆ.

ಕಿರುಚಿದರೂ ಎಂಜಲು ಹಾರಬಹುದು, ಅದರ ಹನಿಗಳ ಮೂಲಕ ಕೋವಿಡ್ ವೈರಾಣು ಹರಡಬಹುದೆಂಬ ಕಾರಣಕ್ಕಾಗಿ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...