ಕೇವಲ 29 ಜನರಿರುವ ಇಟಲಿಯ ಅತಿ ಚಿಕ್ಕ ಹಳ್ಳಿಯಲ್ಲಿ 8 ವರ್ಷಗಳ ನಂತರ ಮತ್ತೆ ಕಂದನ ಅಳು ಕೇಳಿಸಿದೆ. ಮೊರ್ಟೆರೋನ್ ಗ್ರಾಮದ ಜನರು ತಮ್ಮ ಊರಿಗೆ ಬಂದ ಹೊಸ ಅತಿಥಿಯನ್ನು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಲೆಕ್ಕೊದ ಅಲೆಸಾಂಡ್ರೊ ಮಂಜೋನಿ ಆಸ್ಪತ್ರೆಯಲ್ಲಿ ಮಗು ಜನನವಾಗಿದ್ದು, ಡೆನಿಸ್ ಎಂದು ಹೆಸರಿಡಲಾಗಿದೆ. ಮಟ್ಟೆಯೊ ಹಾಗೂ ಸಾರಾ ದಂಪತಿಯ ಮಗು ಹುಟ್ಟಿದ ದಿನ 2.6 ಕೆಜಿ ತೂಕವಿತ್ತು.
ರಿಬ್ಬನ್ ಇಟ್ಟು ಅದರ ಮೇಲೆ ಹೆಸರು ಬರೆದು, ನವಜಾತ ಶಿಶುವಿಗೆ ಹೆಸರಿಡುವ ಶಾಸ್ತ್ರ ಇಟಲಿಯಲ್ಲಿದೆ.
ಮಟ್ಟೆಯೊ ಹಾಗೂ ಸಾರಾ ದಂಪತಿ ಬಾಗಿಲಿಗೆ ಹೂವಿನಾಕೃತಿಯಲ್ಲಿ ರಿಬ್ಬನ್ ಅಂಟಿಸಿ ಅದರ ಮೇಲೆ ಡೆನ್ನಿಸ್ ಎಂದು ಬರೆಯುವ ಮೂಲಕ ನಾಮಕರಣ ಮಾಡಿದ್ದಾರೆ.
ಗ್ರಾಮದಲ್ಲಿ 2012 ರಲ್ಲಿ ಈ ರೀತಿಯ ರಿಬ್ಬನ್ ಅಂಟಿಸಲಾಗಿತ್ತು. ಡೆನ್ನಿಸ್ ಅಜ್ಜ ತೀರಿಕೊಂಡ ನಂತರ ಗ್ರಾಮಕ್ಕೆ ಹೊಸ ವ್ಯಕ್ತಿಯ ಪ್ರವೇಶ ಇರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.”ಇದು ನಮಗೆ ನಿಜವಾಗಿಯೂ ಸಂಭ್ರಮದ ದಿನ” ಎಂದು ಮಾರ್ಟೆರೋನ್ ನ ಮೇಯರ್ ಅಂಟೊನೆಲ್ಲ ಲೆವರ್ನಿಜ್ಜಿ ಹೇಳಿದ್ದಾರೆ. “ನನ್ನ ಗರ್ಭದ ದಿನಗಳು ಸುಲಭವಾಗಿರಲಿಲ್ಲ. ಕೊರೋನಾ ವೈರಸ್ ಕಾರಣಕ್ಕೆ ಮನೆಯಲ್ಲೇ ಕೂರಬೇಕಾಯಿತು. ಪ್ರೀತಿ ಪಾತ್ರರನ್ನೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ, ನನ್ನ ಮಗ ವಂಶವನ್ನು ಬೆಳೆಸುತ್ತಾನೆ ಎಂಬ ಖುಷಿ ಇದೆ” ಎಂದು ಮಗುವಿನ ತಾಯಿ ಸಾರಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
https://www.facebook.com/comunedimorterone/posts/10158583194718112