ಬರೋಬ್ಬರಿ 32 ವರ್ಷಗಳ ಕಾಲ ದ್ವೀಪವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಇಟಲಿಯ ವೃದ್ಧನಿಗೆ ಅಧಿಕಾರಿಗಳು ಒತ್ತಡ ಹೇರಿದ ಕಾರಣ ಇದೀಗ ದ್ವೀಪದಿಂದ ಹೊರಟು ಹೋಗುತ್ತಿದ್ದಾರೆ.
81 ವರ್ಷದ ವೃದ್ಧ ಮೌರೋ ಮೊರಾಂಡಿ ಇಟಲಿಯ ರಾಬಿನ್ಸನ್ ಕ್ಯೊಸೆ ಎಂದು ಹೆಚ್ಚು ಫೇಮಸ್ ಆಗಿದ್ದರು. ಇವರು 1989ರಿಂದ ಉತ್ತರ ಸಾರ್ಡಿನಿಯಾದ ಐಡೆಲ್ ಆಫ್ ಬುಡೆಲ್ಲಿ ಎಂಬಲ್ಲಿ ವಾಸವಾಗಿದ್ದರು.
ಇಟಲಿ ಸರ್ಕಾರ ಈ ದ್ವೀಪವನ್ನ ರಾಷ್ಟ್ರೀಯ ಉದ್ಯಾನವನ್ನಾಗಿ ಪರಿವರ್ತನೆ ಮಾಡುವ ಇರಾದೆ ಹೊಂದಿದೆ. ಇದೇ ಕಾರಣಕ್ಕೆ ಮೊರಾಂಡಿಗೆ ಸಾಕಷ್ಟು ನೋಟಿಸ್ಗಳು ಬಂದಿವೆ.
ಲಾಮಾಡಲೇನಾದ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ದ್ವೀಪವನ್ನು ಪರಿಸರ ಶಿಕ್ಷಣದ ಕೇಂದ್ರವಾಗಿ ಪರಿವರ್ತಿಸಲು ಬಯಸಿದ್ದರಿಂದ ದ್ವೀಪದ ಮಾಲೀಕರು ಮೊರಾಂಡಿಯನ್ನ ಸ್ಥಳಾಂತರಿಸುತ್ತಿದ್ದಾರೆ.
ಮೊರಾಂಡಿ ಏಪ್ರಿಲ್ 25ರಂದು ಫೇಸ್ಬುಕ್ನಲ್ಲಿ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದರು. ನಾನು ಕಳೆದ 32 ವರ್ಷಗಳಿಂದ ಬುಡೆಲ್ಲಿಯನ್ನ ಸಂರಕ್ಷಿಸಿದಂತೆ ಮುಂದೆಯೂ ಸಂರಕ್ಷಿಸಲ್ಪಡುತ್ತದೆ ಎಂಬ ನಂಬಿಕೆಯೊಂದಿಗೆ ನಾನು ಹೊರಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇಟಲಿಯ ರಾಜಕೀಯ ಪರಿಸ್ಥಿತಿಯಿಂದ ಬೇಸರಗೊಂಡಿದ್ದ ಮೊರಾಂಡಿ ಈ ರೀತಿ ಪ್ರತ್ಯೇಕವಾಗಿ ಹೊಸ ಜೀವನ ನಡೆಸುತ್ತಿದ್ದರು.