ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದರು ಸಂಬಳ ಸಿಗದ ಪರಿಸ್ಥಿತಿ ಸುತ್ತಮುತ್ತಲು ಕಾಣಸಿಗುತ್ತದೆ. ಅಂತದ್ದರಲ್ಲಿ ಆಸ್ಪತ್ರೆಯ ಉದ್ಯೋಗಿಯೊಬ್ಬ ಕೆಲಸ ಮಾಡದೇ 15 ವರ್ಷ ಸಂಬಳ ಪಡೆಯುತ್ತಿದ್ದ. ಇಂಥದ್ದೊಂದು ಸುದ್ದಿ ಇಟಲಿಯಿಂದ ಬಂದಿದೆ.
ಗೈರುಹಾಜರಿಗೆ ನಿರಂತರ ಕಾರಣಗಳನ್ನು ಕೊಡುತ್ತಾ ಆತ ಪ್ರತಿ ತಿಂಗಳು ಸಂಬಳವನ್ನು ಮಾತ್ರ ಪಡೆದುಕೊಂಡಿದ್ದ. ಆಸ್ಪತ್ರೆಯ ಮಾಹಿತಿ ಪ್ರಕಾರ 2005ರಿಂದ 15 ವರ್ಷದಲ್ಲಿ 4.85 ಕೋಟಿ ರೂಪಾಯಿ ಆತನ ಖಾತೆಗೆ ಜಮಾ ಮಾಡಲಾಗಿದೆ.
ತಾನು ಕದ್ದ ಕೋವಿಡ್ ಲಸಿಕೆಗಳನ್ನು ಕ್ಷಮಾ ಪತ್ರದೊಂದಿಗೆ ಹಿಂದಿರುಗಿಸಿದ ಕಳ್ಳ….!
ಗೈರು ಹಾಜರಾಗಲು ಒಂದೊಂದೇ ನೆಪ ಹುಡುಕುತ್ತಿದ್ದಾತ ಆಸ್ಪತ್ರೆಯ ನಿರ್ದೇಶಕರಿಗೂ ಶಿಸ್ತು ಕ್ರಮ ಕೈಗೊಳ್ಳದಂತೆ ಬೆದರಿಕೆ ಹಾಕಿದ್ದನಂತೆ.
ಅಂತೂ ಕಳೆದ ವರ್ಷ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ವಂಚನೆ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಆಸ್ಪತ್ರೆಯ ಆರು ವ್ಯವಸ್ಥಾಪಕರು ಕೂಡ ತನಿಖೆಗೆ ಒಳಪಟ್ಟಿದ್ದಾರೆ. ಕಿಂಗ್ ಆಫ್ ಆಬ್ಸೆಂಟೀಸ್ ಎಂದು ಇಟಾಲಿಯನ್ ಮಾಧ್ಯಮ ಎಂದು ಬಣ್ಣಿಸಿವೆ.