ಮಿಲಾನ್: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಚುಂಬಿಸುವುದು ದೊಡ್ಡ ವಿಷಯವಲ್ಲ. ಆದರೆ, ಈಗ ಅಲ್ಲೂ ಒಟ್ಟಿಗೆ ವಾಸಿಸದ ಇಬ್ಬರು ಸಾರ್ವಜನಿಕ ಚುಂಬಿಸುವುದು ನಿಷಿದ್ಧ. ಅದಕ್ಕೆ ದಂಡ ವಿಧಿಸಲಾಗುತ್ತಿದೆ.
ಕೊರೊನಾ ಕಾರಣ ಇಟಲಿ ಸರ್ಕಾರ ಸಾರ್ವಜನಿಕವಾಗಿ ಮಾಸ್ಕ್ ಇಲ್ಲದೇ ಓಡಾಡುವುದನ್ನು, ಪರಸ್ಪರ ಒಂದು ಮೀಟರ್ ಅಂತರ ಕಾಯ್ದುಕೊಳ್ಳದೇ ಇರುವುದು ದಂಡನೆಗೆ ಅರ್ಹವಾಗಿದೆ ಎಂದು ಘೋಷಿಸಿದೆ. ಈ ನಿಯಮ ಒಟ್ಟಿಗೆ ವಾಸಿಸುವವರಿಗೆ ಅನ್ವಯವಾಗುವುದಿಲ್ಲ.
ಇಟಲಿಯ ಮಿಲಾನ್ ನಲ್ಲಿ ಸಾರ್ವಜನಿಕವಾಗಿ ಚುಂಬಿಸಿದ ಜೋಡಿಗೆ 360 ಡಾಲರ್ (ಭಾರತೀಯ 34 ಸಾವಿರ ರೂಪಾಯಿ) ನಷ್ಟು ದುಬಾರಿ ದಂಡ ವಿಧಿಸಲಾಗಿದೆ. ಇಬ್ಬರೂ ಎರಡುವರೆ ವರ್ಷದಿಂದ ಪ್ರೀತಿಸುತ್ತಿದ್ದೇವೆ ಎಂದು ಹೇಳಿದರೂ ಪೊಲೀಸರು ಅದಕ್ಕೆ ಬೆಲೆ ಕೊಟ್ಟಿಲ್ಲ. ಕೊರೊನಾ ನಿಯಮ ಮುರಿದಿದ್ದಕ್ಕಾಗಿ ದಂಡ ವಿಧಿಸಿದ್ದಾರೆ.