ಪ್ರತಿಯೊಬ್ಬರೂ ಭಯಭೀತರಾಗುವಂತೆ ಕಾಣುವ ಹಬ್ಬವೆಂದರೆ ಅದು ಹ್ಯಾಲೋವಿನ್. ಭಯ ಹುಟ್ಟಿಸುವ ಪಾತ್ರದಲ್ಲಿ ಡ್ರೆಸ್ ಆಗುವುದರಿಂದ ಹಿಡಿದು, ಸ್ಕೇರೀ ಥೀಮ್‌ನಲ್ಲಿ ಆಚರಣೆ ಮಾಡುವವರೆಗೂ ಈ ಹ್ಯಾಲೋವಿನ್ ಒಂಥರಾ ಹಾರರ್ ಹಬ್ಬವೆಂದೇ ಹೇಳಬಹುದು.
ನ್ಯಾಶ್ವಿಲ್ಲೇ ಮೂಲದ ಡಿಸೈನರ್ ಜೇಮ್ಸ್ ವೋರ್ಶಾಮ್ ಈ ಬಾರಿಯ ಹ್ಯಾಲೋವಿನ್ ಸಂದರ್ಭಕ್ಕೆ ತಮ್ಮ ಮನೆಯನ್ನು ವಿನೋದಮಯ ಥೀಮ್ ಒಂದರಲ್ಲಿ ಅಲಂಕರಿಸಿದ್ದಾರೆ. ’2020’ಅನ್ನೇ ಈ ಬಾರಿಯ ಥೀಮ್ ಅನ್ನಾಗಿ ಮಾಡಿಕೊಂಡಿರುವ ಜೇಮ್ಸ್, ತಮ್ಮ ಮನೆಯ ಮುಂದಿನ ಅಂಗಳವನ್ನು ದೊಡ್ಡ ಕಟೌಟ್ ಒಂದಲ್ಲಿ 2020 ಎಂದು ಹಾಕಿದ್ದಾರೆ.
ಈ 2020ರ ಕಟೌಟ್ ಪಕ್ಕ, “ನನ್ನ ಆಲೋಚನೆಯಲ್ಲಿ ಬರಬಹುದಾದ ಅತ್ಯಂತ ಭೀತಮಯ ವಿಷಯವೆಂದರೆ ಇದೇ” ಎಂದು ಹಾಕಿದ್ದು, ಈ ವರ್ಷದ ನೆಗೆಟಿವ್ ಮೂಡ್ ಅನ್ನು ಸಾರಿ ಹೇಳುವಂತಿದೆ.