ಮಹಿಳೆಯರ ಬಗ್ಗೆ ಏನಾದರೂ ಮಾತನಾಡಬೇಕೆಂದರೆ ಭಾರೀ ಅಲರ್ಟ್ ಆಗಿರಬೇಕು. ಇಲ್ಲವಾದಲ್ಲಿ ಮಾಧ್ಯಮಗಳು ಅಂತಹ ಹೇಳಿಕೆ ಕೊಟ್ಟ ವ್ಯಕ್ತಿಯ ಜನ್ಮಜಾಲಾಡಿಬಿಡುತ್ತವೆ.
ಇಂಥದ್ದೇ ಒಂದು ನಿದರ್ಶನದಲ್ಲಿ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮಹಿಳೆಯರನ್ನು ’ಹಕ್ಕುಗಳಿರುವ ಪ್ರಾಣಿಗಳು’ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಹಿಳೆಯರ ದೌರ್ಜನ್ಯದ ವಿರೋಧಿ ದಿನ ಎಂದು ಸೋಮವಾರ ಆಚರಿಸಲಾಗಿದ್ದು, ಆ ವೇಳೆ ಮಾತನಾಡಿದ ನೆತನ್ಯಾಹು, “ಮಹಿಳೆಯರು ನಿಮಗೆ ಸೇರಿದವರಲ್ಲ, ದೈಹಿಕ ಹಲ್ಲೆ ಮಾಡಲು ಮಹಿಳೆಯರು ಪ್ರಾಣಿಗಳಲ್ಲ” ಎಂದಿದ್ದಾರೆ.
“ಹೊಡೆಯಲು ಮಹಿಳೆಯರು ಪ್ರಾಣಿಗಳಲ್ಲ. ಪ್ರಾಣಿಗಳಿಗೆ ಹೊಡೆಯಬೇಡಿ ಎಂದು ನಾವು ಇತ್ತೀಚೆಗೆ ಹೇಳುತ್ತೇವೆ. ನಮಗೆ ಪ್ರಾಣಿಗಳ ಮೇಲೆ ದಯೆ ಇದೆ. ಮಹಿಳೆಯರು ಹಾಗೂ ಮಕ್ಕಳೂ ಸಹ ಹಕ್ಕುಗಳಿರುವ ಪ್ರಾಣಿಗಳು” ಎಂದು ಹೇಳಿದ್ದಾರೆ.
ಮುಂದೆ ಏನಾಗಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು. ಇದೀಗ ಮಾಧ್ಯಮಗಳು ನೆತನ್ಯಾಹು ಮಾತುಗಳಿಗೆ ನಾನಾ ಅರ್ಥಗಳನ್ನು ಕಲ್ಪಿಸಿ ಧೂಳೆಬ್ಬಿಸಿವೆ.
https://twitter.com/democracy_prof/status/1330902793268424706?ref_src=twsrc%5Etfw%7Ctwcamp%5Etweetembed%7Ctwterm%5E1330902793268424706%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fisraeli-pm-says-women-are-animals-with-rights-while-calling-for-end-to-gender-violence-3115997.html
https://twitter.com/GrooveSDC/status/1330900885308923904?ref_src=twsrc%5Etfw%7Ctwcamp%5Etweetembed%7Ctwterm%5E1330900885308923904%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fisraeli-pm-says-women-are-animals-with-rights-while-calling-for-end-to-gender-violence-3115997.html