ಕೊರೊನಾ ವೈರಸ್ ಈಗ ಎಲ್ಲರೂ ಫೇಸ್ ಮಾಸ್ಕ್ ಧರಿಸುವುದನ್ನು ಅನಿವಾರ್ಯ ಮಾಡಿದೆ. ಮಾಸ್ಕ್ ಈಗ ಬಟ್ಟೆಯಂತೆ ಅತ್ಯಾವಶ್ಯಕ ವಸ್ತುವಾಗಿಬಿಟ್ಟಿದೆ.
ಇಸ್ರೇಲ್ ನ ಒಂದು ಕಂಪನಿ ತಯಾರಿಸಿದ ಒಂದು ಫೇಸ್ ಮಾಸ್ಕ್ ಬೆಲೆ ಬರೋಬ್ಬರಿ 11 ಕೋಟಿ ರೂಪಾಯಿ!! ಅಬ್ಬಾ …10….25…50 ರೂ.ಗಳ ಮಾಸ್ಕ್ ಕೇಳಿದ್ದೇವೆ. ತೀರ ದುಬಾರಿ ಎಂದರೆ ಎನ್ -95 ಮಾಸ್ಕ್ 500 ರೂ.ವರೆಗಿದೆ. ಕಳೆದ ತಿಂಗಳು ಕೊಯಮತ್ತೂರಿನ ವ್ಯಕ್ತಿಯೊಬ್ಬ 2.75 ಲಕ್ಷಕ್ಕೆ ಬಂಗಾರ ಹಾಗೂ 15 ಸಾವಿರ ರೂ.ಗೆ ಬೆಳ್ಳಿ ಮಾಸ್ಕ್ ಮಾಡಿದ್ದರು. ಇದ್ಯಾವುದು ಕೋಟಿ
ಮಾಸ್ಕ್ ಎನ್ನುತ್ತೀರಾ…? ಅದು ಬಂಗಾರ ಹಾಗೂ ವಜ್ರ ಮಿಶ್ರಿತದ್ದು.
ಇಸ್ರೇಲಿ ಬಂಗಾರದ ಕಂಪನಿಯೊಂದು ಇದನ್ನು ಸಿದ್ಧ ಮಾಡಿದೆ. 18 ಗ್ರಾಂ ಬಂಗಾರದಲ್ಲಿ ಸಿದ್ಧ ಮಾಡಿದ ಈ ಮಾಸ್ಕ್ ನಲ್ಲಿ ಒಟ್ಟು 3600 ಬಿಳಿ ಹಾಗೂ ಕಪ್ಪು ವಜ್ರಗಳನ್ನು ಬಳಸಲಾಗಿದೆ. ಯವೆಲ್ ಕಂಪನಿ ಇದನ್ನು ಸಿದ್ಧ ಮಾಡಿದ್ದು, ಖರೀದಿದಾರನ ಬೇಡಿಕೆಯಂತೆ ದುಬಾರಿ ಮಾಸ್ಕ್ ಒಳಗೆ ಎನ್ – 99 ಫಿಲ್ಟರ್ ಅಳವಡಿಸಲಾಗಿದೆ ಎಂದು ಕಂಪನಿ ಮಾಲೀಕ ಇಸಾಕ್ ಲೇವಿ ತಿಳಿಸಿದ್ದಾರೆ.