
ಇಸ್ರೇಲ್ ನ ಪುರಾತತ್ತ್ವ ತಜ್ಞರೊಬ್ಬರು ಸುಮಾರು 1100 ವರ್ಷದ ಹಿಂದಿನ ಇಸ್ಲಾಮಿಕ್ ಧರ್ಮದ ನಾಣ್ಯಗಳು ಲಭಿಸಿವೆ ಎಂದು ಘೋಷಿಸಿದ್ದಾರೆ.
ರಾಬರ್ಟ್ ಕೂಲ್ ಅವರ ಪ್ರಕಾರ, ‘ತಮಗೆ 425 ಬಂಗಾರದ ನಾಣ್ಯ ಲಭಿಸಿವೆ. ಈ ನಾಣ್ಯಗಳು ಸುಮಾರು 1100 ವರ್ಷದ ಹಿಂದೆ ಆಡಳಿತ ನಡೆಸಿದ್ದ ಅಬ್ಬಾಸಿದ್ ಕಾಲಿಫೇಟ್ ಅವರ ಆಳ್ವಿಕೆಯ ಕಾಲದ್ದಾಗಿದೆ’ ಎಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಈ ನಾಣ್ಯಗಳು 9ನೇ ಶತಮಾನದ್ದಾಗಿದೆ ಎಂದು ತಿಳಿದುಬಂದಿದೆ.
ಅಬ್ಬಾಸಿದ್ ಅವರು ಪೂರ್ವ ಹಾಗೂ ಉತ್ತರ ಆಫ್ರಿಕಾ ಭಾಗದಲ್ಲಿ ಆಳ್ವಿಕೆ ಮಾಡಿದ್ದರು ಎನ್ನಲಾಗಿದೆ. ಈ ಸಂಶೋಧನೆ ಮತ್ತಷ್ಟು ಬೆಳಕು ಚೆಲ್ಲುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.