ಕೋವಿಡ್-19 ಸಾಂಕ್ರಮಿಕ ಎಲ್ಲೆಡೆ ಹಬ್ಬುತ್ತಿರುವ ಕಾರಣ ಜನರಲ್ಲಿ ವ್ಯಾಪಕವಾಗಿ ಭೀತಿ ಮೂಡುತ್ತಿದೆ. ಈ ಸಂದರ್ಭದಲ್ಲಿ ಸೊಂಕು ಪೀಡಿತರಿಗೆ ಮಾನಸಿದ ಸ್ಥೈರ್ಯ ತುಂಬುವುದೂ ಸಹ ವೈದ್ಯರಿಗೆ ದೊಡ್ಡ ಹೊಣೆಗಾರಿಕೆಯಾಗಿದೆ.
ತಮ್ಮಲ್ಲಿಗೆ ಬರುವ ಸೋಂಕು ಪೀಡಿತರಿಗೆ ಶುಶ್ರೂಷೆ ಮಾಡಲು ವೈದ್ಯರು ಹಾಗೂ ನರ್ಸ್ಗಳು ತಮ್ಮನ್ನು ತೊಡಗಿಸಿಕೊಂಡಿದ್ದು, ಈ ಸಂಬಂಧ ಸಾಕಷ್ಟು ವಿಡಿಯೋಗಳು ನೆಟ್ನಲ್ಲಿ ಹರಿದಾಡುತ್ತಿವೆ.
ಇರಾಕ್ನ ಬಾಗ್ದಾದ್ನಲ್ಲಿ ವೃದ್ಧ ಸೋಂಕಿತರೊಬ್ಬರಿಗೆ PPEಧಾರಿ ವೈದ್ಯರೊಬ್ಬರು ಹಾಡೊಂದನ್ನು ಹೇಳುವ ಮೂಲಕ ಅವರನ್ನು ಸಂತೈಸಿ, ಧೈರ್ಯ ತುಂಬಲು ಮಾಡುತ್ತಿರುವ ಪ್ರಯತ್ನದ ವಿಡಿಯೋವೊಂದು ವೈರಲ್ ಆಗಿದೆ.