ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಡೊನಾಲ್ಡ್ ಟ್ರಂಪ್ ಸೇರಿ 30 ಜನರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದ್ದು, ಇಂಟರ್ ಪೋಲ್ ಸಹಾಯ ಕೋರಲಾಗಿದೆ.
ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಸೇನಾ ಕಮಾಂಡರ್ ಖಾಸೀಮ್ ಸುಲೇಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.
ಜನವರಿ 3 ರಂದು ಬಾಗ್ದಾದ್ ನಲ್ಲಿ ಖಾಸೀಮ್ ಸುಲೇಮಾನಿ ಹತ್ಯೆ ನಡೆದಿದ್ದು, ಇದರ ಹಿಂದೆ ಡೊನಾಲ್ಡ್ ಟ್ರಂಪ್ ಸೇರಿ ಇತರೆ 30 ಮಂದಿ ಕೈವಾಡವಿದೆ. ಅವರು ಕೊಲೆ ಮತ್ತು ಭಯೋತ್ಪಾದನೆ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಸರ್ಕಾರಿ ವಕೀಲ ಅಲಿ ಅಲ್ಯಾಸಿಮೆಹ್ರ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧ ಕಾನೂನು ಸಮರ ಮುಂದುವರೆಸಲಾಗುವುದು. ರೆಡ್ ಕಾರ್ನರ್ ನೋಟೀಸ್ ಹೊರಡಿಸುವ ಬಗ್ಗೆ ಇಂಟರ್ ಪೋಲ್ ಗೆ ಮನವಿ ಮಾಡಲಾಗಿದೆ.