ಕೌಲಾಲಂಪುರ: ಸಿಂಗಾಪುರ ಏರ್ಲೈನ್ಸ್ ಲಿಮಿಟೆಡ್(ಎಸ್.ಎ.ಐ.) ಪ್ರಯಾಣಿಕರ ಆರೋಗ್ಯ ಪರೀಕ್ಷೆ ಮಾಡಿ ಇ ಪಾಸ್ ನೀಡಲು ಮುಂದಾಗಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್ಲೈನ್ ಕಂಪನಿಯೊಂದು ಈ ಕಾರ್ಯ ಮಾಡುತ್ತಿದೆ.
ಕೌಲಾಲಂಪುರ ಹಾಗೂ ಜಕಾರ್ತಾದಲ್ಲಿ ಆರೋಗ್ಯ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ಡಿ.23 ರಿಂದ ಈ ಎರಡು ನಗರಗಳ ನಡುವೆ ಓಡಾಡುವ ವಿಮಾನಗಳ ಪ್ರಯಾಣಿಕರಿಗೆ ಪಾಸ್ ನೀಡಲಾಗಿದೆ. ಸಾಧಕ- ಬಾಧಕ ಪರಿಶೀಲಿಸಿ ಎಲ್ಲ ಕಡೆ ವಿಸ್ತರಿಸುವುದಾಗಿ ಸಿಂಗಾಪುರ್ ಏರ್ಲೈನ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯ ಪರೀಕ್ಷೆ ಮಾಡಿ ಅದರ ಇ ಪಾಸ್ ನ್ನು ಅಥವಾ ಮುದ್ರಿತ ಪಾಸನ್ನು ಆರೋಗ್ಯ ಕೇಂದ್ರದಲ್ಲಿ ನೀಡಲಾಗುವುದು. ಅದರಲ್ಲಿ ಕ್ಯುಆರ್ ಕೋಡ್ ಇರಲಿದ್ದು, ಅದನ್ನು ಆಧರಿಸಿ ಮೊಬೈಲ್ ಆ್ಯಪ್ ಬಳಸಿ ಏರ್ ಪೋರ್ಟ್ ಅಧಿಕಾರಿಗಳು ಆರೋಗ್ಯ ಪರೀಕ್ಷೆ ಮಾದರಿ ಪರಿಶೀಲಿಸಲಿದ್ದಾರೆ. ಈ ವ್ಯವಸ್ಥೆಯನ್ನು 2021 ರ ಹೊತ್ತಿಗೆ ವಿಶ್ವದೆಲ್ಲೆಡೆ ವಿಸ್ತರಿಸಲು ಯೊಜಿಸಲಾಗಿದೆ.