alex Certify ಬೇಡ ಎಂದು ಎಸೆದ ಹಳೆಯ ಫೋನ್ ಕವರ್ ಗೆ 1.19 ಕೋಟಿ ರೂ. ಬಿಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡ ಎಂದು ಎಸೆದ ಹಳೆಯ ಫೋನ್ ಕವರ್ ಗೆ 1.19 ಕೋಟಿ ರೂ. ಬಿಡ್

ಬರ್ಲಿನ್: ಬೇಡ ಎಂದ ಎಸೆದ ಹಳೆಯ ವಸ್ತುಗಳಿಗೆ ಕೆಲವು ಬಾರಿ ಎಲ್ಲಿಲ್ಲದ ಬೆಲೆ ಬಂದು ಬಿಡುತ್ತದೆ. ಕಳೆದ ಸೆಪ್ಟೆಂಬರ್ ನಲ್ಲಿ ಮನೆಯಲ್ಲಿದ್ದ ಸಣ್ಣ ಗಿಡವೊಂದು ನ್ಯೂಜಿಲ್ಯಾಂಡ್ ಇ ಮಾರಾಟ ಆ್ಯಪ್ ನಲ್ಲಿ 4.2 ಲಕ್ಷ ರೂ.ಗೆ ಮಾರಾಟವಾಗಿತ್ತು‌. ಈಗ ಮೊಬೈಲ್ ನ ಹಳೆಯ ಕವರ್ ಒಂದಕ್ಕೆ 1.19 ಕೋಟಿ ರೂ. ಬಿಡ್ ಮಾಡುವ ಮೂಲಕ ಇ ಖರೀದಿದಾರರು ಅಚ್ಚರಿ ಮೂಡಿಸಿದ್ದಾರೆ.

ಜರ್ಮನಿಯ ಬಿಯಾಂಕಾ ಕ್ಲಾಸನ್‌ ಎಂಬ 27 ವರ್ಷದ ಯು ಟ್ಯೂಬರ್ ಅವರು ಇ-ಬೇ ಆ್ಯಪ್ ನಲ್ಲಿ ಪೋಸ್ಟ್ ಮಾಡಿದ ಹಳೆಯ ಮೋಲ್ಡ್ ಮೊಬೈಲ್ ಕವರ್ ಗೆ ನೆಟ್ಟಿಗರು 1 ಲಕ್ಷ 20 ಸಾವಿರ ಡಾಲರ್ ಎಂದರೆ 1 ಕೋಟಿ 19 ಲಕ್ಷ ರೂ. ಬಿಡ್ ಮಾಡಿದ್ದಾರೆ.

ಬಿಡ್ ನಲ್ಲಿ ಬಂದ ಹಣವನ್ನು ಸಮಾಜ ಸೇವೆಗೆ ಬಳಸಲು ಬಿಯಾಂಕಾ ಕ್ಲಾಸನ್‌ ಯೋಜಿಸಿದ್ದರು. ಆದರೆ, ಅದಕ್ಕೆ ಶೇ.10 ರಷ್ಟು ತೆರಿಗೆ ಕಟ್ಟಬೇಕು ಎಂಬ ಮಾಹಿತಿ ಪಡೆದ ಅವರು, ಯೋಜನೆ ಕೈಬಿಟ್ಟು, ಇ-ಬೇ ಆ್ಯಪ್ ನಲ್ಲಿ ಹಾಕಿದ್ದ ಪೋಸ್ಟ್ ವಾಪಸ್ ಪಡೆದಿದ್ದಾರೆ.

“ನೀರಿನೊಳಗಿನ ಫೋಟೋ ತೆಗೆಯುವಾಗ ಮೌಲ್ಡ್ ಫೋನ್ ಕವರ್ ಹಾಳಾಗಿತ್ತು. ಅದನ್ನು ಕಪಾಟಿನ ಯಾವುದೋ ಮೂಲೆಯಲ್ಲಿ ಇಟ್ಟಿದ್ದೆ. ಇತ್ತೀಚೆಗೆ ಅದನ್ನು ನೋಡಿ ತಮಾಷೆಗೆ ಇ-ಬೇನಲ್ಲಿ ಪೋಸ್ಟ್ ಮಾಡಿದೆ. ಕೇವಲ 8 ತಾಸಿನಲ್ಲಿ ಜನ ಅದಕ್ಕೆ ಅಷ್ಟೊಂದು ಹಣ ನೀಡಿ ಖರೀದಿಸಲು ಮುಂದಾಗಿದ್ದು ನೋಡಿ ಅಚ್ಚರಿಯಾಯಿತು. ನಿಜವಾಗಿಯೂ ಅಷ್ಟು ಹಣ ನೀಡಲು ಜನ ಸಿದ್ಧವಿದ್ದರೋ ಅಥವಾ ತಮಾಷೆಗಾಗಿ ಬಿಡ್ ಮಾಡಿದ್ದರೋ ಎಂಬುದು ಗೊತ್ತಿಲ್ಲ” ಎಂದು ಕ್ಲಾಸನ್ ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...