alex Certify ’ಮಿರಾಕಲ್ ಕ್ಯೂರ್‌’ ಹೆಸರಿನಲ್ಲಿ ಮಾರಲಾಗುತ್ತಿದೆ ಬ್ಲೀಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಮಿರಾಕಲ್ ಕ್ಯೂರ್‌’ ಹೆಸರಿನಲ್ಲಿ ಮಾರಲಾಗುತ್ತಿದೆ ಬ್ಲೀಚ್

ಕೊರೊನಾ ವೈರಸ್‌ಗಿಂತ ದೊಡ್ಡ ಕಾಟವಾಗಿ ಪೀಡಿಸುತ್ತಿರುವುದೆಂದರೆ, ಈ ಸೋಂಕಿನ ಕುರಿತ ವದಂತಿಗಳು ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ. ಒಂದೆಡೆ ವೈದ್ಯರು ಹಾಗೂ ಸಂಶೋಧಕರು ಕೋವಿಡ್-19 ವೈರಸ್‌ಗೆ ಮದ್ದು ಕಂಡುಹಿಡಿಯಲು ಹಗಲು – ರಾತ್ರಿ ಯತ್ನಿಸುತ್ತಿದ್ದರೆ ಮತ್ತೊಂದೆಡೆ ಈ ಸೋಂಕನ್ನು ಹೊಡೆದೋಡಿಸುವುದಾಗಿ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ.

ʼದಿ ಗಾರ್ಡಿಯನ್ʼ‌ನಲ್ಲಿ ವರದಿಯಾದ ರಿಪೋರ್ಟ್‌ ಒಂದರ ಪ್ರಕಾರ, ಅಮೆಜಾನ್‌ನಲ್ಲಿ ಬ್ಲೀಚ್‌ ಒಂದನ್ನು ಕೋವಿಡ್-19ಗೆ ’ಮಿರಾಕಲ್ ಕ್ಯೂರ್‌’ ಎಂದು ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ದ್ರವಗಳ ಸೇವನೆ ವಿರುದ್ಧ ಅಮೆರಿಕದ ಆಹಾರ & ಮದ್ದು ಪ್ರಾಧಿಕಾರ ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರೂ ಯಾವುದೇ ಪ್ರಯೋಜನ ಇಲ್ಲ ಎಂಬಂತಾಗಿದೆ.

CD Kit ಮತ್ತು NatriChlor ಬ್ರಾಂಡ್ ಹೆಸರುಗಳಡಿ ಕ್ಲೋರೀನ್ ಆಕ್ಸೈಡ್‌ ದ್ರಾವಣವನ್ನು ಮಾರಾಟ ಮಾಡಲಾಗುತ್ತಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಈ ಉತ್ಪನ್ನದ ಮಾರಾಟದ ರಿವ್ಯೂ ಸೆಕ್ಷನ್‌ನಲ್ಲಿ ಜನರು ಅದನ್ನು ಕುಡಿಯುವ ಮೂಲಕ ತಮ್ಮನ್ನು ತಾವು ’ಡಿಸ್ ಇನ್‌ಫೆಕ್ಟ್‌’ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...