ಕೊರೊನಾದ ಬಳಿಕ ವಿಶ್ವದ ಹಲವು ವಿಚಾರಗಳು ಬದಲಾಗಿವೆ. ಇದೀಗ ಲೈವ್ ಸಂಗೀತ ಕಛೇರಿಗಳ ಕಲ್ಪನೆಯೂ ಬದಲಾಗಿದೆ.
ಹೌದು, ಆ.29 ರಂದು ಇಂಡೋನೇಷ್ಯಾದ ಜಕರ್ತಾದಲ್ಲಿ ಸಂಗೀತ ಕಛೇರಿ ನಡೆದಿದೆ. ಪಾಪ್ ಗಾಯಕ ಎನ್ಸೆಬಲ್ ಕಹಿತ್ನಾ ಅವರ ಕಾರ್ಯಕ್ರಮ ನಡೆದಿದೆ. ಬಯಲಲ್ಲಿ ನಡೆದಿರುವ ಈ ಕಾರ್ಯಕ್ಕೆ ಆಗಮಿಸುವವರೂ ಕಾರಿನಲ್ಲಿಯೇ ಕುಳಿತು ಕಛೇರಿ ಆಲಿಸಬೇಕು.
ಈ ವಿನೂತನ ಪ್ರಯೋಗಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸುಮಾರು 300 ಕಾರ್ ಗಳಲ್ಲಿ 900ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ಹಾಡು ಸವಿದ ಬಳಿಕ ತಮ್ಮ ಖುಷಿಯನ್ನು ಹಂಚಲು ಕಾರಿನ ಮುಂಭಾಗದ ಲೈಟ್ ನ್ನು ಡಿಮ್ ಅಂಡ್ ಡಿಪ್ ಮಾಡುತ್ತಿದ್ದರು.
ಆಯೋಜಕರೊಬ್ಬರು ಈ ಬಗ್ಗೆ ಮಾತನಾಡಿ, ಕಳೆದ ಐದು ತಿಂಗಳಿನಿಂದ ವರಮಾನ ಇಲ್ಲದೇ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಇದೀಗ ಒಂದೊಂದೇ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಆಗಮಿಸುವವರು ಎಲ್ಲ ಮಾಸ್ಕ್ ಧರಿಸಬೇಕಿದ್ದು , ಕೊರೊನಾ ನೆಗೆಟಿವ್ ರಿಪೋರ್ಟ್ ಸಲ್ಲಿಸುವುದು ಕಡ್ಡಾಯವಾಗಿದೆ.