alex Certify ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯರಿಗೆ ಇಲ್ಲಿದೆ ಗುಡ್ ​ನ್ಯೂಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯರಿಗೆ ಇಲ್ಲಿದೆ ಗುಡ್ ​ನ್ಯೂಸ್​

ಯುಎಇನಲ್ಲಿ ವಾಸವಾಗಿರೋ ಭಾರತೀಯರು ಫ್ಲೈಟ್​ ಮೂಲಕ ತಾಯ್ನಾಡಿಗೆ ವಾಪಸ್ಸಾಗಲು ಭಾರತೀಯ ರಾಯಭಾರಿ ಕಚೇರಿಯ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಅವರು ನೇರವಾಗಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮೂಲಕ ವಿಮಾನ ಟಿಕೆಟ್​ ಬುಕ್​ ಮಾಡಬಹುದಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಏರ್​ ಇಂಡಿಯಾ ಎಕ್ಸ್​ ಪ್ರೆಸ್​, ಭಾರತ ಹಾಗೂ ಯುಎಇ ಏರ್​ ಬಬಲ್​ ಒಪ್ಪಂದದ ಪಾಲುದಾರರಾಗಿದೆ. ಆದ್ದರಿಂದ ಉಭಯ ರಾಷ್ಟ್ರಗಳಿಗೆ ಪ್ರಯಾಣಿಸಲಿಚ್ಚಿಸುವ ಪ್ರಯಾಣಿಕರು ಏರ್​ ಇಂಡಿಯಾ ಎಕ್ಸ್​ಪ್ರೆಸ್​ನಲ್ಲಿ ನೇರವಾಗಿ ಟಿಕೆಟ್​ ಕಾಯ್ದಿರಿಸಬಹುದು ಅಂತಾ ಬರೆದುಕೊಂಡಿದೆ.

ಕಳೆದ ವಾರವಷ್ಟೇ ಈ ವಿಚಾರವಾಗಿ ಮಾತನಾಡಿದ ಭಾರತೀಯ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್​ ಶ್ರೀವಾಸ್ತವ್​, ವಂದೇಭಾರತ್​ ಮಿಷನ್​ನಡಿಯಲ್ಲಿ ಈಗಾಗಲೇ 17.2 ಲಕ್ಷ ಭಾರತೀಯರನ್ನ ವಾಪಸ್​​ ಕರೆಸಿಕೊಳ್ಳಲಾಗಿದೆ. ಅಕ್ಟೋಬರ್​ನಲ್ಲಿ ಆರಂಭವಾಗಿರೋ ವಿಬಿಎಂ 7ನೇ ಹಂತದಲ್ಲಿ 25 ದೇಶಗಳಿಂದ 873 ಅಂತಾರಾಷ್ಟ್ರೀಯ ವಿಮಾನಗಳನ್ನ ಬಳಸಿಕೊಳ್ತೇವೆ ಅಂತಾ ಮಾಹಿತಿ ನೀಡಿದ್ರು.

ದೇಶದಲ್ಲಿ ಕೊರೊನಾ ವೈರಸ್​ ಹೆಚ್ಚಾಗ್ತಾ ಇದ್ದಂತೆ ಕೇಂದ್ರ ಸರ್ಕಾರ ಮೇ ತಿಂಗಳಿನಲ್ಲಿ ವಂದೇ ಭಾರತ ಮಿಷನ್​ ಆರಂಭಿಸಲಾಗಿತ್ತು. ಹಾಗೂ ಈ ಮಿಷನ್​ ಈಗಾಗಲೇ 7ನೇ ಹಂತದಲ್ಲಿ ತನ್ನ ಯಶಸ್ವಿ ಕಾರ್ಯ ನಡೆಸುತ್ತಿದೆ;.

https://twitter.com/FlyWithIX/status/1315535487126237185?ref_src=twsrc%5Etfw%7Ctwcamp%5Etweetembed%7Ctwterm%5E1315535487126237185%7Ctwgr%5Eshare_3&ref_url=https%3A%2F%2Fwww.ndtv.com%2Findians-abroad%2Findians-in-uae-can-book-flight-tickets-to-india-without-embassy-registration-2308908

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...