ದುಬೈನಲ್ಲಿರುವ ಅಜ್ಮಾನ್ ಭಾರತೀಯ ಪ್ರೌಢಶಾಲೆಯ ಪ್ರಾಂಶುಪಾಲರಿಗೆ ವಿಮಾನ ನಿಲ್ದಾಣದಲ್ಲಿ 1ಮಿಲಿಯನ್ ಜಾಕ್ ಪಾಟ್ ಹೊಡೆದಿದೆ. ಭಾರತಕ್ಕೆ ಬರಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದವರು ದುಬೈ ಡ್ಯೂಟಿ ಫ್ರೀ ರಾಫೆಲ್ ಡ್ರಾದಲ್ಲಿ ಈ ಬಹುಮಾನ ಗೆದ್ದಿದ್ದಾರೆ.
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಎರಡರಲ್ಲಿ ನಡೆದ ಡ್ರಾ ನಂತರ ಮಾಲತಿ ದಾಸ್ ಒಂದು ಮಿಲಿಯನ್ ಡಾಲರ್ ಗೆದ್ದಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಸಂದರ್ಭದಲ್ಲಿ ಆಶೀರ್ವಾದಪೂರ್ವಕವಾಗಿ ಲಾಟರಿ ಹೊಡೆದಿದೆ. ಉತ್ತಮ ಕೆಲಸಕ್ಕೆ ಬಳಸುತ್ತೇನೆ. ನನ್ನ ಶಾಲೆಗೂ ಸ್ವಲ್ಪ ಹಣ ನೀಡುವೆ. ಹಾಗೆಯೇ ಭಾರತಕ್ಕೆ ತೆರಳಲು ಪ್ರಯತ್ನಿಸುತ್ತಿರುವ ಹಣದ ಅಗತ್ಯ ಇರುವ ನನ್ನ ಸಂಬಂಧಿಕರಿಗೆ ಸಹಾಯ ಮಾಡಲು ಬಯಸುತ್ತೇನೆ ಎಂದಿದ್ದಾರೆ.