ಬಾಹ್ಯಾಕಾಶ ಅಧ್ಯಯನದ ಆಸಕ್ತರಿಗೆ ಭಾರೀ ಇಷ್ಟವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುರು ಹಾಗೂ ಶನಿ ಗ್ರಹಗಳು ಒಂದಕ್ಕೊಂದು ನಿಕಟವಾಗಿರುವ ಈ ಚಿತ್ರ ಸಖತ್ ಸುದ್ದಿಯಲ್ಲಿದೆ.
ಮೆಲ್ಬರ್ನ್‌ನಲ್ಲಿರುವ ಭಾರತೀಯ ಛಾಯಾಗ್ರಾಹಕರೊಬ್ಬರು ಈ ಸ್ಮರಣೀಯ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಸುಮಾರು 400 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜರುಗಿದ ಈ ಅಪರೂಪದ ವಿದ್ಯಮಾನದಲ್ಲಿ ಎರಡೂ ಗ್ರಹಗಳು ಒಂದಕ್ಕೊಂದು ಬಹಳ ಸನಿಹದಲ್ಲಿ ಕಾಣಿಸಿಕೊಂಡಿವೆ.
ಸಜಲ್ ಚಕ್ರಬೊರ್ತಿ ಹೆಸರಿನ ಈ ಚಾಯಾಗ್ರಾಹಕ ತಮ್ಮ ಡಿಎಸ್‌ಎಲ್ಆರ್ ಕ್ಯಾಮೆರಾದಲ್ಲಿ ಟೆಲಿಫೋಟೋ ಲೆನ್ಸ್ ಬಳಸಿಕೊಂಡು ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಈ ಚಿತ್ರಕ್ಕೆ ಟ್ವಿಟರ್‌ನಲ್ಲಿ 12 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಸಂದಿವೆ.