ಭಾರತ ಮೂಲದ ಚಾಲಕರೊಬ್ಬರ ಸಮಯಪ್ರಜ್ಞೆಯಿಂದಾಗಿ ರೈಲಿಗೆ ಸಿಲುಕಲಿದ್ದ ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಜೀವಂತ ಉಳಿದ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ಜರುಗಿದೆ.
ಸಂಕಷ್ಟದ ನಡುವೆ ಭರ್ಜರಿ ಖುಷಿ ಸುದ್ದಿ…..! ಜೀವನ ಪೂರ್ತಿ ನಿಮ್ಮ ಜೊತೆಗಿರಲಿದೆ ಕೊರೊನಾ ವಿರುದ್ಧ ಹೋರಾಡಿದ ಪ್ರತಿಕಾಯ
ಜನಾಂಗೀಯ ದ್ವೇಷದ ಕಚ್ಚಾಟ ಜೋರಾಗಿ, ಏಷ್ಯಾ ಮೂಲದ ಈ ವ್ಯಕ್ತಿಯನ್ನು ರೈಲು ಹಳಿಗಳತ್ತ ತಳ್ಳಲಾಗಿತ್ತು. ಟೋಬಿನ್ ಮಡತಿಲ್ ಹೆಸರಿನ 29 ವರ್ಷ ವಯಸ್ಸಿನ ಚಾಲಕ ಪ್ಲಾಟ್ಫಾರಂ ಬಳಿ ಗೊಂದಲಮಯ ಸನ್ನಿವೇಶ ನೋಡಿ ಕೂಡಲೇ ಅಲರ್ಟ್ ಆಗಿ ಆ ವ್ಯಕ್ತಿಯಿಂದ 30 ಅಡಿ ಅಂತರದಲ್ಲೇ ರೈಲು ನಿಲ್ಲಿಸಲು ಸಫಲರಾಗಿದ್ದಾರೆ.
ಹಣ್ಣಿನ ರಾಜ ‘ಮಾವು’ ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ
“ನಿಲ್ದಾಣದತ್ತ ರೈಲನ್ನು ಚಲಿಸಿಕೊಂಡು ಬರುತ್ತಿದ್ದ ವೇಳೆ ನನ್ನತ್ತ ಕೈ ಬೀಸುತ್ತಿರುವ ಜನರನ್ನು ನೋಡಿದ ಕೂಡಲೇ ರೈಲನ್ನು ಎಮರ್ಜೆನ್ಸಿ ಮೋಡ್ಗೆ ತಂದು ನಿಲ್ಲಿಸಿದೆ” ಎಂದು ಮಡತಿಲ್ ನ್ಯೂಯಾರ್ಕ್ ಪೋಸ್ಟ್ಗೆ ತಿಳಿಸಿದ್ದಾರೆ. ಇದಾದ ಕೂಡಲೇ ಹಳಿಗಳ ಮೇಲೆ ಬಿದ್ದು ರಕ್ತ ಬರುತ್ತಿದ್ದ ಆ ವ್ಯಕ್ತಿಯತ್ತ ಧಾವಿಸಿದ ಮಡತಿಲ್, ಸಬ್ವೇ ನಿಯಂತ್ರಣ ಕೇಂದ್ರಕ್ಕೆ ಸಂಪರ್ಕಿಸಿ ತುರ್ತು ವೈದ್ಯಕೀಯ ನೆರವು ಪಡೆಯಲು ಸಫಲರಾಗಿದ್ದಾರೆ.