ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ತಂಡವು ಕಾಗದ ಆಧಾರಿತ ಎಲೆಕ್ಟ್ರೋಕೆಮಿಕಲ್ ಸೆನ್ಸಾರ್ ಬಳಸಿ ಕ್ಷಿಪ್ರ, ಅಲ್ಟ್ರಾ ಸೆನ್ಸಿಟಿವ್ ಕೋವಿಡ್ ಪರೀಕ್ಷೆಯನ್ನ ಅಭಿವೃದ್ಧಿಪಡಿಸಿದೆ.
ಈ ಸೆನ್ಸಾರ್ 5 ನಿಮಿಷದ ಒಳಗಾಗಿ ದೇಹದಲ್ಲಿ ಕೊರೊನಾ ವೈರಸ್ ಉಪಸ್ಥಿತಿಯನ್ನ ಪತ್ತೆ ಮಾಡಲಿದೆ.
ಅಮೆರಿಕದ ಇಲಿನಾಯನ್ಸ್ ವಿಶ್ವ ವಿದ್ಯಾಲಯದ ಸಂಶೋಧಕರು ಕೋವಿಡ್ ಉಪಸ್ಥಿತಿ ಕಂಡುಹಿಡಿಯಲು ಗ್ರ್ಯಾಫಿನ್ ಆಧಾರಿತ ಎಲೆಕ್ಟ್ರೋಕೆಮಿಕಲ್ ಬಯೋಸೆನ್ಸಾರ್ನ್ನು ರಚಿಸಿದ್ದಾರೆ.
ಪ್ರೊಫೆಸರ್ ದೀಪಂಜನ್ ಪ್ಯಾನ್ ನೇತೃತ್ವದಲ್ಲಿ ಸಂಶೋಧಕರು ಈ ಬಯೋಸೆನ್ಸಾರ್ ನ್ನು ಕಂಡು ಹಿಡಿದಿದ್ದಾರೆ.