ತನ್ನ ತಾಯಿಯನ್ನೇ ಕೊಲೆ ಮಾಡಿದ ಆಪಾದನೆ ಮೇಲೆ ಭಾರತೀಯ ಮೂಲದ 31 ವರ್ಷದ ವ್ಯಕ್ತಿಯೊಬ್ಬನನ್ನು ಲಂಡನ್ನ ವಿಂಬಲ್ಡನ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಪಶ್ಚಿಮ ಲಂಡನ್ನಲ್ಲಿರುವ ಗ್ರೀನ್ಫೋರ್ಡ್ನಲ್ಲಿರುವ ಶನಿಲ್ ಪಟೇಲ್ 62 ವರ್ಷ ವಯಸ್ಸಿನ ತನ್ನ ತಾಯಿಯನ್ನು ಕೊಂದ ಆಪಾದನೆ ಎದುರಿಸುತ್ತಿದ್ದಾನೆ. ಶನಿಲ್ ತಾಯಿ ಹಂಸಾ ಪಟೇಲ್ ತಲೆಗೆ ಗಾಯಗಳಾಗಿ ಮೃತಪಟ್ಟಿದ್ದಾರೆ.
ಕೊಲೆ ತನಿಖೆಯನ್ನು ಆರಂಭಿಸಿದ ಪೊಲೀಸರು ಪ್ಯಾರಾಮೆಡಿಕ್ಸ್ಗಳ ಸಹಾಯದಿಂದ ಪ್ರಕರಣವನ್ನು ಬೇಧಿಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ.