
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಅನೇಕ ಟ್ರಂಪ್ ಬೆಂಬಲಿಗರು ಅಮೆರಿಕದ ಧ್ವಜ ಹಿಡಿದುಕೊಂಡಿದ್ದರೆ ಇನ್ನೂ ಕೆಲವರು 2024ಕ್ಕೆ ಟ್ರಂಪ್ ನಮ್ಮ ಅಧ್ಯಕ್ಷ ಎಂಬ ಬ್ಯಾನರ್ ಹಿಡಿದಿದ್ದರು. ಆದರೆ ಕೆಲ ಅಪರಿಚಿತರು ಮಾತ್ರ ತ್ರಿವರ್ಣ ಧ್ವಜವನ್ನ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಈ ವಿಡಿಯೋ ನೋಡಿದ ಸಾಕಷ್ಟು ಭಾರತೀಯರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಮೊದಲು ರಿ ಟ್ವೀಟ್ ಮಾಡಿದ ಟ್ವೀಟಿಗನೊಬ್ಬ ನಮ್ಮ ಭಾರತದ ಧ್ವಜವನ್ನ ನಾವಿಲ್ಲಿ ಕಾಣಲು ಇಚ್ಚಿಸೋದಿಲ್ಲ ಎಂದು ಬರೆದಿದ್ದಾರೆ.
ಬಿಜೆಪಿಯ ವರುಣ್ ಗಾಂಧಿ, ಭಾರತದ ಧ್ವಜ ಇಲ್ಲೇಕೆ ಇದೆ..? ಈ ಹಿಂಸಾಚಾರದಲ್ಲಿ ನಾವು ಖಂಡಿತವಾಗಿಯೂ ಭಾಗಿಯಾಗಲು ಇಚ್ಚಿಸೋದಿಲ್ಲ ಎಂದು ಟ್ವೀಟಾಯಿಸಿದ್ದಾರೆ. ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಕೂಡ ಟ್ವೀಟ್ ಮಾಡಿ, ಬೇರ ದೇಶದ ಅಪರಾಧ ಕೃತ್ಯಗಳಲ್ಲಿ ನಮ್ಮ ದೇಶದ ಬಾವುಟವನ್ನ ಬಳಸಬೇಡಿ ಎಂದು ಕಿಡಿಕಾರಿದ್ದಾರೆ.