alex Certify ಕೆಲಸ ಕಳೆದುಕೊಂಡ್ರೂ ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿಯಾದ ಅದೃಷ್ಟವಂತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕಳೆದುಕೊಂಡ್ರೂ ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿಯಾದ ಅದೃಷ್ಟವಂತ..!

ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ನವನೀತ್​​ ಕೊರೊನಾ ಸಂಕಷ್ಟದಿಂದಾಗಿ ತಮ್ಮ ಕೆಲಸವನ್ನ ಕಳೆದುಕೊಂಡಿದ್ದರು. ಇನ್ನು ತಮ್ಮ ಜೀವನದ ಕತೆ ಮುಗೀತು ಅಂತಾ ಅಂದುಕೊಳ್ಳುವಷ್ಟರಲ್ಲಿ ನವನೀತ್​ ಇದೀಗ ಕೋಟ್ಯಾಧಿಪತಿಯಾಗಿದ್ದಾರೆ.

ದುಬೈ ಡ್ಯೂಟಿ ಫ್ರೀ ಮಿಲೇನಿಯಮ್​ ಮಿಲೆಯನೇರ್​ ಲಕ್ಕಿ ಡ್ರಾದಲ್ಲಿ ನವನೀತ್​ ಮಿಲಿಯನ್​ ಡಾಲರ್​ ಗಳಿಸಿದ ಲಕ್ಕಿ ವಿನ್ನರ್​ ಅಂತಾ ಗಲ್ಫ್​ ನ್ಯೂಸ್​ ವರದಿ ಮಾಡಿದೆ.

ಕೊರೊನಾದಿಂದಾಗಿ ಅಬುದಾಬಿ ಮೂಲದ ಕಂಪನಿಯಲ್ಲಿ ಕೆಲಸ ಕಳೆದುಕೊಂಡಿದ್ದ ನವನೀತ್ ನೋಟಿಸ್​ ಅವಧಿಯನ್ನ ಪೂರೈಸುತ್ತಿದ್ದರು. ಪತ್ನಿ ಹಾಗೂ ಮಗುವಿನೊಂದಿಗೆ ದುಬೈನಲ್ಲೇ ನೆಲೆಸಿರುವ ನವನೀತ್​ ಕೆಲಸ ಇದೇ ತಿಂಗಳ 28ರಂದು ಕೊನೆಗಾಣಲಿತ್ತು.

ಮೂಲತಃ ಕೇರಳದ ಕಾಸರಗೋಡಿನವರಾದ ನವನೀತ್​​ ನವೆಂಬರ್​ 22ರಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಬಹುಮಾನದ ಮೊತ್ತವನ್ನ ನವನೀತ್​ ನಾಲ್ಕು ಮಂದಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಆದರೂ ಸಹ ನವನೀತ್​ 1,47,70,002.14 ರೂಪಾಯಿ ಹಣವನ್ನ ಮನೆಗೆ ಕೊಂಡೊಯ್ಯಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...